ಬೆಂಗಳೂರು: ಪುಟ್ಟ ಪರದೆಯ ಕನ್ನಡತಿ ಸೀರಿಯಲ್ ಈಗ ಭಾರೀ ಓಡ್ತಾ ಇದೆ. ನಾಯಕಿ ಭುವಿ ಮದುವೆ ಸಂಭ್ರಮ ಇಲ್ಲಿ ಈಗ ಪ್ರಮುಖ ವಿಷಯವೇ ಆಗಿದೆ. ಇದೇ ಸೀರಿಯಲ್ ನ ವಿಲನ್ ಪಾತ್ರಧಾರಿ ವರು ಪಾತ್ರ ಮದುವೆ ಮನೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದೆ. ಇದೇ ಸೀನ್‌ನ ಒಂದಷ್ಟು ಬಿಹೈಂಡ್‌ದಿ ಸೀನ್ ವೀಡಿಯೋ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ಹೌದು. ವರು ಪಾತ್ರಧಾರಿ ಸಾರಾ ಅಣ್ಣಯ್ಯ ಸೀರಿಯಸ್ ಸೂಸೈಡ್ ಸೀನ್ ನಲ್ಲಿ ಕಾಮಿಡಿ ಮಾಡಿ ಬಿಟ್ಟಿದ್ದಾರೆ. ಕೈ ಕುಯ್ದುಕೊಂಡು ಆಸ್ಪತ್ರೆ ಸೇರುವ ಸೀನ್‌ನಲ್ಲೂ ಅಷ್ಟೆ. ನಟಿ ಸಾರಾ ಅಣ್ಣಯ್ಯ ಸಖತ್ ಮಜಾ ಮಾಡಿದ್ದಾಳೆ.
ವಿಶೇಷವೆಂದ್ರೆ ಈ ಎಲ್ಲ ಬಿಹೈಂಡ್ ದಿ ಸೀನ್ ವೀಡಿಯೋವನ್ನ ಸಾರಾ ಅಣ್ಣಯ್ಯ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ನಲ್ಲೂ ಹಂಚಿಕೊಂಡಿದ್ದಾರೆ. ಇದಕ್ಕೆ ಕಾಮೆಂಟ್ಸ್ ಕೂಡ ಬಂದಿವೆ.
PublicNext
27/06/2022 08:14 am