ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶುಗರ್‌ ಲೆಸ್ಸು-ಕಾಮಿಡಿ ಮಸ್ತು-ಟ್ರೈಲರ್ ಈಗ ಔಟು !

ಬೆಂಗಳೂರು:ಕನ್ನಡದಲ್ಲಿ ಈಗೊಂದು ಸಿನಿಮಾ ಬರ್ತಿದೆ. ಇದೇ ಜುಲೈ-8ಕ್ಕೆ ಈ ಚಿತ್ರ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ, ಈ ಚಿತ್ರ ಶುಗರ್ ಪೇಶೆಂಟ್ ಆಧರಿಸಿಯೇ ಬರ್ತಿದೆ. ಆದರೆ, ಈ ಕಥೆಯನ್ನ ಕಾಮಿಡಿ ಚೌಕಟ್ಟಿನಲ್ಲಿಯೇ ಹೇಳಿರೋದು ವಿಶೇಷ. ಇದರ ಬಗೆಗಿನ ಒಂದಿಷ್ಟು ಮಾಹಿತಿ ಇಲ್ಲಿದೆ.

ಶುಗರ್‌ಲೆಸ್ ಚಿತ್ರದಲ್ಲಿ ಶುಗರ್ ಪೇಶೆಂಟ್ ಆಗಿ ಯುವ ನಟ ಪೃಥ್ವಿ ಅಂಬರ್ ಅಭಿನಯಿಸಿದ್ದಾರೆ. ಪ್ರಿಯಾಂಕಾ ತಿಮ್ಮಯ್ಯ ಈ ನಾಯಕನಿಗೆ ಇಲ್ಲಿ ಜೋಡಿ ಆಗಿದ್ದಾರೆ.

ಶಶಿಧರ್ ಕೆಎಂ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ಇದ್ದಾರೆ. ಡೈರೆಕ್ಟರ್ ಎಸ್.ನಾರಾಯಣ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕಾಮಿಡಿ ನಟ ನವೀನ್ ಪಡೀಲ್ ಇಲ್ಲಿ ಕಾಮಿಡಿ ಡೋಸ್ ಕೊಟ್ಟಿದ್ದಾರೆ. ಅನೂಪ್ ಸಿಳೀನ್ ಸಂಗೀತ ಕೊಟ್ಟಿದ್ದಾರೆ. ಒಟ್ಟಾರೆ, ಈ ಶುಗರ್‌ಲೆಸ್ ಚಿತ್ರದಲ್ಲಿ ಕಾಮಿಡಿಯ ಸಿಹಿ ಕಿಕ್ ಸಖತ್ ಆಗಿಯೇ ಇದ್ದಂತಿದೆ. ಟ್ರೈಲರ್ ಅದನ್ನೇ ಈಗ ಹೇಳ್ತಾ ಇದೆ.

Edited By :
PublicNext

PublicNext

26/06/2022 08:19 pm

Cinque Terre

128.36 K

Cinque Terre

0

ಸಂಬಂಧಿತ ಸುದ್ದಿ