ಬೆಂಗಳೂರು:ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಕನ್ನಡಕ್ಕೆ ಬರ್ತಿದ್ದಾರಾ ? ಹೌದು. ಇಂತಹ ಅನುಮಾನ ಹುಟ್ಟುವ ಒಂದು ಬೆಳವಣಿಗೆ ಈಗ ಆಗಿದೆ. ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕಚೇರಿಯಲ್ಲಿಯೇ ಈ ಸುಂದರಿ ಕಾಣಿಸಿಕೊಡಿದ್ದಾರೆ.
ಹೌದು.ನಿರ್ಮಾಪಕ ವಿಜಯ್ ಕಿರಗಂದೂರು ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ ಕಚೇರಿಯಲ್ಲಿಯೇ ವೆಲ್‌ಕಮ್ ಮಾಡಿಕೊಂಡಿದ್ದಾರೆ. ಹೂ ಗುಚ್ಚ ಕೊಟ್ಟು ವೆಲ್ ಕಮ್ ಮಾಡಿರೋ ಫೋಟೋವನ್ನ ಹೊಂಬಾಳೆ ಫಿಲ್ಮ್ಸ್ ಟ್ವಿಟರ್ ಪೇಜ್ ನಲ್ಲಿಯೇ ಹಂಚಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ ಮೂಲಕವೇ ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜ್ ಕುಮಾರ್‌ಲಾಂಚ್ ಆಗುತ್ತಿದ್ದಾರೆ. ಈ ಚಿತ್ರದ ನಾಯಕಿ ಆಗೋ ಮೂಲಕ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಕನ್ನಡಕ್ಕೆ ಕಾಲಿಡ್ತಿದ್ದಾರೆ ಅನ್ನೋ ಮಾಹಿತಿ ಹರಿದಾಡುತ್ತಿದೆ. ಆದರೆ, ಅಧಿಕೃತವಾಗಿ ಇನ್ನೂ ಯಾವುದು ಹೊರ ಬಿದ್ದಿಲ್ಲ.
ಮಾನುಷಿ ಚಿಲ್ಲರ್ 2017 ರಲ್ಲಿಯೇ ವಿಶ್ವ ಸುಂದರಿ ಕಿರಿಟ ಮುಡಿಗೇರಿಸಿಕೊಂಡಿದ್ದರು.ಅಕ್ಷಯ್ ಕುಮಾರ್ ಅಭಿನಯದ ಪೃಥ್ವಿರಾಜ್ ಚಿತ್ರದಲ್ಲೂ ಮಾನುಷಿ ಚಿಲ್ಲರ್ ಅಭಿನಯಿಸಿದ್ದರು. ಈಗ ಕನ್ನಡಕ್ಕೆ ಬರ್ತಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿದೆ.
PublicNext
25/06/2022 04:32 pm