ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ ಚಿತ್ರ ಇದೇ ತಿಂಗಳ 24 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ ನಲ್ಲಿ ಅದ್ದೂರಿ ಪ್ರೀ ರಿಲೀಸ್ ಇವೆಂಟ್ ಕೂಡ ನಡೆದಿದೆ. ಈ ಕಾರ್ಯಕ್ರಮದ ಝಲಕ್‌ನ ವೀಡಿಯೋ ಇಲ್ಲಿದೆ ನೋಡಿ.
ಜೂನ್-24 ರಂದು ತ್ರಿವಿಕ್ರಮ ಸಿನಿಮಾ ರಿಲೀಸ್ ಆಗುತ್ತಿದೆ. ಸಹನಾಮೂರ್ತಿ ನಿರ್ದೇಶನದ ಈ ಚಿತ್ರದ ಪ್ರಿ ರಿಲೀಸ್ ಇವೆಂಟ್ ತುಂಬಾ ಗ್ರ್ಯಾಂಡ್ ಆಗಿಯೇ ಇತ್ತು. ಎಲ್ಲ ಸೆಲೆಬ್ರಿಟಿಗಳೂ ಈ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವಿಶೇಷವಾಗಿಯೇ ಈ ಕಾರ್ಯಕ್ರಮ ಕೂಡ ಆಯೋಜನೆ ಆಗಿತ್ತು. ವಿಕ್ರಂ ರವಿಚಂದ್ರನ್ ಮತ್ತು ಆಕಾಂಕ್ಷ ಅಭಿನಯದ ಈ ಚಿತ್ರ ಅಷ್ಟೆ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಅರ್ಜುನ್ ಜನ್ಯ ಸಂಗೀತದ ಹಾಡುಗಳು ಈಗಾಗಲೇ ಮೋಡಿ ಕೂಡ ಮಾಡಿವೆ.
PublicNext
22/06/2022 09:32 pm