ಬೆಂಗಳೂರು: ನನ್ನ ಮಗ ಗುರುರಾಜ್ ಅದ್ಭುತ ಕಲಾವಿದ. ನನ್ನ ನೋಡಿಕೊಂಡೇ ಬೆಳೆದವ. ಆದರೆ 'ಇಲ್ಲಿಯೇ ಇರು, ಇಲ್ಲಿಯೇ ಬೆಳೆಯಬೇಕು' ಅಂತ ಲಗಾಮ್ ಹಾಕಿ ನನ್ನ ಮಗನ ಭವಿಷ್ಯವನ್ನು ನಾನೇ ಹಾಳು ಮಾಡಿದೆ ಎಂದು ನವರಸ ನಾಯಕ ಜಗ್ಗೇಶ್ ನೋವು ತೋಡಿಕೊಂಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಹಾಸ್ಯಕ್ಕೆ ಹೆಸರುವಾಸಿ, ನವರಸಗಳ ಒಡೆಯ. ಆದರೆ ಇವರ ಹಿರಿಯ ಪುತ್ರ ಗುರುರಾಜ್ ಭವಿಷ್ಯ ಕಟ್ಟುವಲ್ಲಿ ಜಗ್ಗೇಶ್ ಎಡಿವಿದ್ರಾ..? ಈ ಪ್ರಶ್ನೆಗೆ ಸ್ವತ ಜಗ್ಗೇಶ್ ಉತ್ತರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್ ಅವರು, 'ನನ್ನ ಮಗನಿಗೆ ಬೇರೆ ಭಾಷೆಗಳಿಂದ ಒಳ್ಳೆಯ ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ನಾನು ಅವುಗಳನ್ನು ಒಪ್ಪಿಕೊಳ್ಳದಂತೆ ತಡೆದೆ. ಹಾಗೆ ಮಾಡಬಾರದಿತ್ತು ಅಂತ ಈಗ ಅನಿಸುತ್ತಿದೆ. ನಾನು ಆಗ ಒಪ್ಪಿಗೆ ನೀಡಿದ್ದರೆ ಇಂದು ನನ್ನ ಮಗ ದೊಡ್ಡ ಸ್ಟಾರ್ ಆಗಿರುತ್ತಿದ್ದ. ಆ ಅವಕಾಶಗಳಿಗೆಲ್ಲ ನಾನೇ ಮಣ್ಣು ಎರಚಿದೆ. ನನ್ನ ಜೀವನದ ಬಹಳ ದೊಡ್ಡ ತಪ್ಪು' ಎಂದು ಬಹಳ ಬೇಸರ ವ್ಯಕ್ತಪಡಿಸಿದರು.
ಯಶಸ್ಸು ಅನ್ನೋದು ಜಗ್ಗೇಶ್ ಹಿರಿಯ ಪುತ್ರ ಗುರುರಾಜ್‌ಗೆ ಇನ್ನೂ ಮರಿಚಿಕಿಯಾಗಿಯೇ ಇದೆ. ಆದರೂ ಸಿನಿ ಪಯಣ ನಿಂತಿಲ್ಲ. ಅದು ಕಾಗೆ ಮೊಟ್ಟೆ ಹೆಸರಿನ ಮೂಲಕ ಈಗ ಮತ್ತೆ ಸಾಗಿದೆ. ಇದೇ ಅಕ್ಟೋಬರ್ 1ರಂದು ಗುರುರಾಜ್ ಜಗ್ಗೇಶ್ ಅಭಿನಯದ ಈ ಕಾಗೆ ಮೊಟ್ಟೆ ರಿಲೀಸ್ ಆಗುತ್ತಿದೆ. ಅದರ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ನಡೆದ ರಿಲೀಸ್ ಪ್ರೆಸ್ ಮೀಟ್ ಅಲ್ಲಿಯೇ ಜಗ್ಗೇಶ್ ತಮ್ಮ ಮನದ ತುಮುಲವನ್ನ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಒಂದಷ್ಟು ನಿರಾಳರಾಗಿದ್ದಾರೆ.
PublicNext
29/09/2021 05:46 pm