ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಲ್ಲು ಮೇಲೆ ಬಿಗ್ ಬಾಸ್ ಸ್ಪರ್ಧಿಗಳ ಅಸಮಾಧಾನ: ಅದಕ್ಕೆ ಹಲವು ಕಾರಣ

ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ರಿಯಾಲಿಟಿ ಷೋ ನಿರೂಪಕರೂ ಆಗಿದ್ದಾರೆ‌. ರಿಯಾಲಿಟಿ ಷೋ ಅಂದ ಮೇಲೆ ಅಲ್ಲಿ ನೂರಾರು ಜಗಳ, ಬೈಗುಳ, ನಿಂದನೆ, ಗಾಸಿಪ್ ಇದೆಲ್ಲ ಇದ್ದೇ ಇರುತ್ತೆ.

ಆದ್ರೆ ಈಗ ಸದ್ದು ಮಾಡ್ತಿರೋದು ಅದಲ್ಲ. ಬದಲಾಗಿ ಸ್ಪರ್ಧಿಗಳು ಬಿಗ್ ಬಾಸ್ ನಿರೂಪಕ ಸಲ್ಲು ಮೇಲೆ ಸಿಡಿಮಿಡಿಗೊಂಡಿದ್ದಾರೆ. ಅದಕ್ಕೆ ಹಲವಾರು ಕಾರಣಗಳನ್ನೂ ಕೊಟ್ಟಿದ್ದಾರೆ.

ಬಿಗ್ ಬಾಸ್ ಸ್ಪರ್ದೆಯಲ್ಲಿ ಭಾಗವಹಿಸಿದ್ದ ಕವಿತಾ ಕೌಶಿಕ್ ಅವರು, ಸಲ್ಮಾನ್ ಖಾನ್ ನನ್ನ ಮಾತು ಕೇಳಿಸಿಕೊಳ್ಳುತ್ತಿಲ್ಲ‌ ಎಂದು ಆರೋಪಿಸಿದ್ದಾರೆ‌. ಅದರಂತೆ ರುಬಿನಾ ದಿಲೈಲ್ ಅವರು ಸಲ್ಮಾನ್ ಅವರು ನನ್ನ ಗಂಡನನ್ನು ಅವಮಾನಿಸಿದರೆ ನಾನು ಸಹಿಸೋದಿಲ್ಲ ಎಂದಿದ್ದಾರೆ‌.

ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆಕಾಶ್ ದೀಪ್ ಸೈಗಾಲ್ ಅವರು ಸಲ್ಮಾನ್ ಖಾನ್ ನನ್ನ ಸಿನಿಮಾ ಬದುಕನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದರಂತೆ ಇನ್ನೋರ್ವ ಸ್ಪರ್ಧಿ ಸಪ್ನಾ ಭವನಾನಿ ಸಲ್ಮಾನ್ ಖಾನ್ ಕುರಿತು ಅಸಭ್ಯ ಕಮೆಂಟ್ ಮಾಡಿದ್ದರು.

ಹೀಗೆ ಸ್ಪರ್ಧೆಯಲ್ಲು ಭಾಗವಹಿಸಿದ ಜುಬೈರ್ ಖಾನ್, ಕುಶಾಲ್ ಟಂಡನ್, ಕರೀಷ್ಮಾ ತನ್ನಾ , ಸ್ವಾಮಿ ಓಂ ಹಾಗೂ ಇತರ ಸ್ಪರ್ಧಿಗಳು ಸಲ್ಮಾನ್ ಜೊತೆ ದ್ವೇಷ ಕಟ್ಟಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

20/11/2020 08:27 pm

Cinque Terre

130.8 K

Cinque Terre

6