ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಪುಗಾರಿಕೆ ಕುತಂತ್ರಕ್ಕೆ ಚೈತ್ರಾ ಕುಂದಾಪುರ ತಿರುಗೇಟು

ದೊಡ್ಮನೆಯಲ್ಲಿ ಈಗ ಎರಡು ತಂಡಗಳು ರಚನೆಯಾಗಿವೆ. ಶೋಭಾ ಶೆಟ್ಟಿ ನಾಯಕತ್ವದ ಕೆಂಪು ಟೀಮ್‌ ರಚನೆಯಾಗಿದೆ. ಅತ್ತ ಭವ್ಯಾ ಗೌಡ ಅವರ ನೇತೃತ್ವದ ನೀಲಿ ಟೀಮ್‌ ರಚನೆಯಾಗಿದ್ದು ಈ ಎರಡು ತಂಡಗಳ ಸದಸ್ಯರ ಬಳಿ ಪಾಯಿಂಟ್ಸ್ ಇವೆ. ಅದನ್ನು ಕಿತ್ತುಕೊಳ್ಳುವ ಆಟ ಈಗ ಶುರುವಾಗಿದೆ.

ತನ್ನ ಜಾಣತಾನವನ್ನು ಬಳಸಿ ಯಾರು ಕೂಡ ಬೇರೆಯವರ ಪಾಯಿಂಟ್ಸ್ ಅನ್ನು ಕಿತ್ತುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರು ಮೈಯೆಲ್ಲಾ ಕಣ್ಣಾಗಿ ಕುಳಿತಿದ್ದಾರೆ. ಪ್ರತಿ ಟಾಸ್ಕ್ ಗೆದ್ದಂತೆ ಪಾಯಿಂಟ್ಸ್ ಹೆಚ್ಚಾಗುತ್ತದೆ. ಈಗ ಪಾಯಿಂಟ್ಸ್ ಕಾಪಾಡುವುದು ಕೂಡ ತುಂಬಾನೇ ಮುಖ್ಯ......

ಇವತ್ತಿನ ಪ್ರೋಮೋದಲ್ಲಿ ಚೈತ್ರಾ ಅವರ ಬಳಿ ಇರುವ ಪಾಯಿಂಟ್ಸ್‌ಗಾಗಿ ಎಲ್ಲರೂ ಮುಗಿಬಿದ್ದಿದ್ದಾರೆ. ಇದಕ್ಕೆ ಚೈತ್ರಾ ಫುಲ್ ಗರಂ ಆಗಿ ಎದುರಾಳಿ ತಂಡದವರಿಗೆ ಕಿತ್ತುಕೊಳ್ಳುವಂತೆ ಇಲ್ಲ. ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ ಗುಂಪುಗಾರಿಕೆ ಮಾಡ್ಕೊಂಡು ಕುತಂತ್ರತನವನ್ನು ನಾನು ಮಾಡೋದಿಲ್ಲ. ಡ್ರಾಮಾ ಕ್ವೀನ್‌ಗಳು ಯಾರು ಎಂದು ಗೊತ್ತಾಯ್ತು. ನನ್ನ ಆಟವನ್ನು ಇನ್ಮೇಲೆ ಶುರು ಮಾಡ್ತೀನಿ. ಗುಂಪು ಕಟ್ಕೊಂಡು ಪ್ಲ್ಯಾನ್ ಮಾಡ್ಕೊಂಡು ಬರಲ್ಲ, ಸಿಂಗಲ್ ಸಿಂಹ ಥರ ಹೊಡೀತಿನಿ ಅಂತ ಘರ್ಜಿಸಿದ್ದಾರೆ ಚೈತ್ರಾ ಕುಂದಾಪುರ.

ಇದಕ್ಕೆ ಐಶ್ವರ್ಯಾ ಎದುರು ಉತ್ತರ ಕೊಟ್ಟಿದ್ದಾರೆ ಹೌದು ನಾನು ಡ್ರಾಮಾ ಕ್ವೀನ್.. ಏನಿವಾಗ ಎಂದು ಹೇಳಿದ್ದಾರೆ. ಇನ್ನು ಯಾರಿಗೆ ಜಾಸ್ತಿ ಪಾಯಿಂಟ್ಸ್ ಸಿಗಲಿದೆ? ಯಾರು ವಿನ್ನರ್ ಆಗಲಿದ್ದಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕು........

Edited By : Somashekar
PublicNext

PublicNext

21/11/2024 11:48 am

Cinque Terre

48.05 K

Cinque Terre

0

ಸಂಬಂಧಿತ ಸುದ್ದಿ