ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಟ್ರೈಲರ್ ರಿಲೀಸ್ ಆಗಿದೆ. ರಿಯಲ್ ಸ್ಟಾರ್ ಅವರ ನಿರ್ದೇಶನದ ಯುಐ ಸಿನಿಮಾಗಾಗಿ ಕಾತುರದಲ್ಲಿದ್ದ ಅಭಿಮಾನಿಗಳಿಗೆ ಇದೀಗ ಚಿತ್ರತಂಡದಿಂದ ಗುಡ್ ನ್ಯೂಸ್ ಸಿಕ್ಕಿದೆ. ಉಪ್ಪಿ ಟ್ರೈಲರ್‌ನಲ್ಲಿ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
UI ಟ್ರೈಲರ್ ಡಿಫರೇಂಟ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ಟ್ರೈಲರ್ ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ.
ಇದರಲ್ಲಿ ಉಪೇಂದ್ರ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಮತ್ತಷ್ಷು ಇಂಟ್ರೆಸ್ಟ್ ಜಾಸ್ತಿಯಾಗಿದೆ.
ಚಿತ್ರ ಡಿ.20ಕ್ಕೆ ರಿಲೀಸ್ ಆಗಲಿದ್ದು, ಈ ಸಿನಿಮಾದಲ್ಲಿ ಉಪೇಂದ್ರಗೆ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ.
PublicNext
02/12/2024 07:36 pm