ಬೆಳಗಾವಿ : ವಿದ್ಯೆ ನೀಡಬೇಕಾದ ಶಿಕ್ಷಕರು ಮಕ್ಕಳಿಗೆ ತಾವು ಕುಳಿತುಕೊಳ್ಳುವ ಕುರ್ಚಿ ಹೊರುವ ಶಿಕ್ಷೆ ನೀಡಬಹುದಾ?
ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಲ್ಲಾಪೂರ ಗ್ರಾಮದಲ್ಲಿ ಘಟನೆ ನಡೆದಿದೆ. ರಿಪೇರಿ ಮಾಡಿದ ಕುರ್ಚಿಯನ್ನು ಸುಮಾರು ದೂರ ತಲೆ ಮೇಲೆ ಹೊತ್ತು ಮಕ್ಕಳು ಸಾಗುವ ದೃಶ್ಯದ ವಿಡಿಯೋ ಮಾಡಿ ಪಬ್ಲಿಕ್ ನೆಕ್ಸ್ಟ್ ಓದುಗರು ಹಂಚಿಕೊಂಡಿದ್ದಾರೆ.
ಬಾಲ್ಯದಲ್ಯದಲ್ಲಿಯೇ ಮಕ್ಕಳಿಗೆ ಕೆಲಸಗಳ ಬಗ್ಗೆ ಅರಿವು ಮೂಡಿಸುವುದು ಉತ್ತಮ. ಆದರೆ ಈ ರೀತಿ ಅಲ್ಲ, ಒಂದು ವೇಳೆ ಕಬ್ಬಿಣದ ಕುರ್ಚಿ ಮೈಮೇಲೆ ಬಿದ್ದು ಏನಾದರೂ ಎಡವಟ್ಟಾದರೆ ಯಾರು ಹೊಣೆ? ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ.
ಪ್ರಕರಣ ಕುರಿತು ಪ್ರಶ್ನಿಸಿದರೆ ಉತ್ತರ ನೀಡದೇ ಶಿಕ್ಷಕರು ನುಣುಚಿಕೊಳ್ಳುತ್ತಿದ್ದಾರಂತೆ.
PublicNext
20/06/2022 09:30 am