ದಾವಣಗೆರೆ: ನಾನು ಆವರೇಜ್ ವಿದ್ಯಾರ್ಥಿನಿ. ರ‍್ಯಾಂಕ್ ಬರುತ್ತೇನೆ ಎಂದು ಕನಸು ಮನಸಿನಲ್ಲಿಯೂ ಊಹಿಸಿರಲಿಲ್ಲ. ನನ್ನ ತಂದೆ ಹಾಗೂ ತಾಯಿಗೆ ರ‍್ಯಾಂಕ್ ಬರಬೇಕೆಂಬ ಆಸೆ ಇತ್ತು. ಅದನ್ನು ಈಡೇರಿಸಿದ್ದು ಖುಷಿ ತಂದಿದೆ ಎಂದು ದಾವಣಗೆರೆ ವಿವಿಯಲ್ಲಿ ಐದು ಸ್ವರ್ಣ ಪದಕ ಪಡೆದ ಸ್ವಪ್ನಾ ಎಸ್. ಎಂ. ಹರ್ಷ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ವಿದ್ಯಾನಗರದಲ್ಲಿ ವಾಸವಾಗಿರುವ ಮಂಜುನಾಥ್ ಎಸ್. ಎಂ. ಹಾಗೂ ಗಿರಿಜಮ್ಮ ದಂಪತಿಯ ಪುತ್ರಿ ಈಕೆ. ಮುಂದೆ ಪಿಹೆಚ್ ಡಿ ಮಾಡಿ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಬೇಕು ಎಂಬ ಆಸೆ ಇದೆ. ಈ ನಿಟ್ಟಿನಲ್ಲಿ ಶ್ರಮ ವಹಿಸುತ್ತೇನೆ. ನಾನು ಓದಿದ ವಿವಿಯಲ್ಲಿ ಪಾಠ ಮಾಡುವ ಮೂಲಕ ನನ್ನಂತೆಯೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂಥ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕೆಂಬ ಆಸೆ ಇದೆ ಅಂತ ಸ್ವಪ್ನ ಹೇಳಿದ್ದಾರೆ.
PublicNext
24/03/2022 12:59 pm