ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಖಾಸಗಿ ಶಾಲೆಗಳಿಗೆ ಸರ್ಕಾರ ಆದೇಶ

ವರದಿ - ಗಣೇಶ್ ಹೆಗಡೆ

ಬೆಂಗಳೂರು : 2020-21ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.30ರಷ್ಟುಕಡಿತಗೊಳಿಸಿದ್ದ ರಾಜ್ಯ ಸರ್ಕಾರ, ಶೇ.70ರಷ್ಟುಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಶುಕ್ರವಾರ ಅದೇಶಿಸಿದೆ.

ಶೇ.30 ರಷ್ಟು ಶುಲ್ಕ ಕಡಿತ ಮಾಡಿ ಆದೇಶವನ್ನು ಪ್ರಶ್ನಿಸಿದ್ದ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೊರೆ ಹೋಗಿದ್ದವು. ಸದ್ಯ ಕೋರ್ಟ್, ಶುಲ್ಕ ಪರಿಷ್ಕರಿಸಿ ಬೋಧನಾ ಶುಲ್ಕದಲ್ಲಿ ಶೇ.15 ರಷ್ಟು ಕಡಿತ ಮಾಡುವಂತೆ ಆದೇಶ ಹೊರಡಿಸಿತ್ತು.

ಇದೀಗ 2020-21 ನೇ ಸಾಲಿನ ಪೂರ್ಣ ಶುಲ್ಕ ಪಡೆದಿದ್ದರೆ, ಹೆಚ್ಚುವರಿ ಶುಲ್ಕ ವಾಪಸ್ ಮಾಡುವಂತೆ ಶಾಲೆಗಳಿಗೆ ಸರ್ಕಾರ ಸೂಚಿಸಿದೆ.ಇದ್ಕೆ ಖಾಸಗಿ ಶಾಲೆಗಳ ಒಕ್ಕೂಟ ತೀವ್ರ ಅಕ್ರೋಶ ಹೊರಹಾಕಿದೆ.

Edited By : Manjunath H D
PublicNext

PublicNext

13/11/2021 11:53 am

Cinque Terre

26.45 K

Cinque Terre

0