ಕೊಪ್ಪಳ:ಕೋವಿಡ್ ನಿಂದ ಒಳ್ಳೆಯದೂ ಆಗಿದೆ. ಕೆಟ್ಟದ್ದೂ ಆಗುತ್ತಿದೆ. ಕೆಟ್ಟದ್ದು ಯಾವುದು ಅಂತ ಹೇಳೋದು ಬೇಡವೇ ಬೇಡ. ಅದು ಎಲ್ಲರಿಗೂ ಗೊತ್ತಿದೆ. ಒಳ್ಳೆಯದು ಏನು ಗೊತ್ತ ? ಖಾಸಗಿ ಶಾಲೆಗಳ ಅಟ್ಟಹಾಸಕ್ಕೆ ಮುಚ್ಚಿಹೋಗುತ್ತಿದ್ದ ಸರ್ಕಾರಿ ಶಾಲೆಗಳು, ಮರು ಜೀವ ಪಡೆಯುತ್ತಿವೆ. ಮಕ್ಕಳ ದಾಖಲಾತಿ ಸಂಖ್ಯೆನೂ ಹೆಚ್ಚಾಗುತ್ತಿವೆ.
ಇದು ನಿಜ,ಸರ್ಕಾರಿ ಶಾಲೆಗಳಲ್ಲಿ ಈಗ ಮಕ್ಕಳ ದಾಖಲಾತಿ ಹೆಚ್ಚಾಗಿದೆ.ಇದಕ್ಕೆ ಕಾರಣ, ಕೋವಿಡ್ ನಿಂದ ಬಳಲಿದ ಖಾಸಗಿ ಶಾಲೆಯ ಶುಲ್ಕ ಹೆಚ್ಚಳ ಹಾಗೂ ಇನ್ನಿತರ ಖರ್ಚಿನ ಬಾಬತ್ತು ಮಿತಿಮೀರಿರೋದೇ ಆಗಿದೆ. ಇದಕ್ಕೆ ಒಂದಷ್ಟು ಎಕ್ಷಾಂಪಲ್ ಇವೆ. ಕೊಡ್ತೀವಿ ಓದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷ 2,89,526 ಮಕ್ಕಳು ದಾಖಲಾಗಿದ್ದರು. ಈ ಸಲ ಅದು ಹೆಚ್ಚಾಗಿ, 2,95,606 ಆಗಿದೆ. ಇವರೆಡನ್ನೂ ಲೆಕ್ಕ ಮಾಡಿದ್ರೆ,12,615 ಮಕ್ಕಳ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ. ಖಾಸಗಿ ಶಾಲೆಯ ಲೆಕ್ಕವನ್ನ ಹೇಳೊದಾದರೆ,ಕಳೆದ ವರ್ಷ 69,497 ಮಕ್ಕಳು ದಾಖಲಾಗಿದ್ದರು. ಈಗ ಅದು 63,932 ಕ್ಕೆ ಇಳಿದಿದೆ. ಇನ್ನೂ ಇಳಿಯೋ ಸಾಧ್ಯತೆ ಇದೆ. ಪೋಷಕರು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಹೋಗಲು ವರ್ಗಾವಣೆ ಪತ್ರ ಪಡೆಯಲು ಮುಂದಾಗಿದ್ದಾರೆ.
PublicNext
20/10/2021 04:31 pm