ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಕ್ಸಿಜನ್ ಸಪೋರ್ಟ್‌ನಲ್ಲಿದ್ದು ಪರೀಕ್ಷೆ ಬರೆದ ತಾಂಡಾ ಹುಡುಗಿ ಬಾಚಿದ್ದು ಎಲ್ಲ 625 ಅಂಕ.!

ಬಾಗಲಕೋಟೆ: ಹೃದಯ ಸಂಬಂಧಿ ಕಾಯಿಲೆ ಹಾಗೂ ಉಸಿರಾಟದ ಕಾಯಿಲೆ ಇದ್ದರೂ ಅದಕ್ಕೆಲ್ಲ ಸೆಡ್ಡು ಹೊಡೆದು ಬಾಗಲಕೋಟೆಯ ವಿದ್ಯಾರ್ಥಿನಿಯೋರ್ವಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಹೌದು. ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಗಂಗಮ್ಮ. ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿಯೇ ಈ ಸಾಧನೆ ಮಾಡಿದ ಸಾಧಕಿ. ಕಳೆದ ಕೆಲವು ವರ್ಷಗಳಿಂದ ಗಂಗಮ್ಮ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಈ ಸಾಧನೆಯನ್ನು ಮಾಡಿದ್ದಾಳೆ. ತಾಯಿ ಆಶಾಕಾರ್ಯಕರ್ತೆಯಾಗಿದ್ದು, ತಂದೆ ಖಾಸಗಿ ನೌಕರ. ಬಡತನ ಹಾಗೂ ಅನಾರೋಗ್ಯದ ನಡುವೆಯೂ ವಿದ್ಯಾರ್ಥಿನಿ ಈ ಸಾಧನೆ ಮಾಡಿದ್ದಕ್ಕೆ ಶಾಲೆಯ ಶಿಕ್ಷಕರು, ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿನಿಗೆ ಉತ್ತಮವಾಗಿ ಓದಲು ಬಹಳಷ್ಟು ಸಹಕಾರವನ್ನ ನೀಡಿದ್ದಾರೆ. ಆಕೆ ಸತತವಾಗಿ ಆಕ್ಸಿಜನ್ ಮೇಲೆ ಇರಬೇಕಾಗಿರುವುದರಿಂದ ಶಾಲೆಯ ಶಿಕ್ಷಕರು ಆಕೆಯ ಓದಿಗೆ ಸಾಕಷ್ಟು ಸಹಕಾರವನ್ನು ನೀಡಿದ್ದಕ್ಕೆ ಪೋಷಕರು ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇನ್ನು ಆಕೆಯ ಶಾಲೆಯ ಶಿಕ್ಷಕರು ಕೂಡ ಸಂತಾವನ್ನ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

10/08/2021 07:21 am

Cinque Terre

47.43 K

Cinque Terre

2