ಬೆಳಗಾವಿ(ಚಿಕ್ಕೋಡಿ): ಬೆಳಗಾವಿಯ ಶೈಕ್ಷಣಿಕ ಜಿಲ್ಲೆಯೆಂದು ಕರೆಯಲ್ಪಡುವ ಚಿಕ್ಕೋಡಿ ಜಿಲ್ಲೆ ಈ ಬಾರಿ ಎಸ್ಸ್ಎಸ್ಸ್ಎಲ್ಸಿ ಪರೀಕ್ಷೆಯ ಫಲಿತಾಂಶ ೧೦೦ ಕ್ಕೆ ೧೦೦ ರಷ್ಟು ಆಗಿದೆ. ಹೌದು ಕಳೆದ ತಿಂಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲಿಸಿ ಸರಕಾರ ನಡೆಸಿದ SSLC ಪರೀಕ್ಷೆ ಫಲಿತಾಂಶ ಇಂದು ಹೊರಬಿದ್ದಿದ್ದು ಚಿಕ್ಕೋಡಿ ಜಿಲ್ಲೆಯ ಐವರು ವಿದ್ಯಾರ್ಥಿನಿಯರು 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದಾರೆ.
ಫಲಿತಾಂಶ ಪ್ರಕಟವಾದ ಬಳಿಕ ಚಿಕ್ಕೋಡಿ ಜಿಲ್ಲೆಯ ಶಿಕ್ಷಣಾಧಿಕಾರಿ ಗಜಾನನ ಮನ್ನಿಕೇರಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು. ಇದೆ ವೇಳೆ ಜಿಲ್ಲೆಯಲ್ಲಿ ೪೦ ಸಾವಿರಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಕೋವಿಡ್ ಆತಂಕದ ನಡುವೆಯೂ ಪರೀಕ್ಷೆ ಹಾಜರಾಗಿ ಉತ್ತಮ ಫಲಿತಾಂಶ ಪಡೆದು ಜಿಲ್ಲೆಗೆ ಕಿರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದ ಹುಕ್ಕೇರಿ ತಾಲೂಕಿನ ಗಾಯತ್ರಿ ಮರಾಠೆಶಿಲ್ಪಾ ಬಸ್ತವಾಡೆ, ವಿನಯ ಮಹಾಂತೇಶ ಹಿರೇಮಠ, ನಿಪ್ಪಾಣಿ ತಾಲೂಕಿನ ಕೀರ್ತಿ ಕರೆಪ್ಪಗೋಳ
ಶ್ರೀಶೈಲ ಸುಧಾಕರ ಕೋಣೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಶಿಕ್ಷಣಾಧಿಕಾರಿಗಳಾದ ಶ್ರೀ ಗಂಗಾಧರ್, ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಮತಿ ರೇವತಿ ಮಠದ ಹಾಗೂ ವಿಷಯ ಪರಿವೀಕ್ಷಕರಾದ .ಶ್ರೀ ಎಸ್ ಎಸ್ ಹೂಗಾರ್ ,ಕಾಂಬಳೆ ಹಾಗೂ ಹಚ್ಚಡದ ಅವರು ಉಪಸ್ಥಿತರಿದ್ದರು.
PublicNext
09/08/2021 09:26 pm