ಮುಂಬೈ: ಮಕ್ಕಳಿಂದ ನಾವು ಕಲಿಯಬೇಕಾಗಿರುವುದು ಬಹಳ ಇದೆ. ಇದಕ್ಕೆ ನಿದರ್ಶನ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ದೇವಗೇಢ ಗ್ರಾಮದ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಶಾಲೆಗೆ ತೆರಳುತ್ತಿದ್ದರು. ಈ ವೇಳೆ ಎಲ್ಲ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಒಬ್ಬರ ಹಿಂದೆ ಒಬ್ಬರು ಸಾಗುತ್ತಿದ್ದರು. ಅಷ್ಟೇ ಅಲ್ಲದೆ ರಸ್ತೆಯ ಎಡಭಾಗದಲ್ಲಿ ಸಾಗುವ ಮೂಲಕ ರಸ್ತೆ ನಿಯಮ ಪಾಲಿಸಿ ನೆಟ್ಟಿಗರ ಮನ ಗೆದ್ದಿದ್ದಾರೆ.
ಈ ದೃಶ್ಯವನ್ನು ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಭಾರೀ ವಾಹನದ ಸಹ ಚಾಲಕ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ''ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಹೇಗೆ ರಸ್ತೆ ಸಂಚಾರ ನಿಯಮ ಪಾಲಿಸುತ್ತಿದ್ದಾರೆ ನೋಡಿ'' ಎಂದು ಸಹ ಚಾಲಕ ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ''ಅಪ್ಪ ಅಮ್ಮ ಕೊಡಿಸಿದ ಬೈಕ್‌ನಲ್ಲಿ ಶೋಕಿ ಮಾಡುತ್ತಾ, ಅಡ್ಡಾದಿಡ್ಡಿ ಬೈಕ್, ಕಾರು ಓಡಿಸುವ ಯುವಕರು ಈ ಮಕ್ಕಳಿಂದ ಪ್ರೇರಣೆಯಾಗಲಿ'' ಎಂದು ಕಮೆಂಟ್ ಮಾಡಿದ್ದಾರೆ
PublicNext
17/02/2021 11:39 am