ಬೆಂಗಳೂರು: ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಉಡುಪಿಯ ಗಹನಾ ಮಾನಸಿ ದೇಶದ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಇಸ್ಕಾನ್ ರಾಷ್ಟ್ರಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯನ್ನು 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ವಿವಿಧ ರಾಜ್ಯಗಳ 370 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಅತ್ಯಂತ ಕಿರಿಯ ವಯಸ್ಸಿನ ಉಡುಪಿ ಮೂಲದ, ಪ್ರಸ್ತುತ ಬೆಂಗಳೂರಿನಲ್ಲಿರುವ ಐದು ವರ್ಷ ಹತ್ತು ತಿಂಗಳಿನ ಗಹನಾ ಮಾನಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕವೊಂದನ್ನು ನಿಗದಿ ಮಾಡಲಾಗಿತ್ತು. ಶ್ಲೋಕ ಪೂರ್ಣಗೊಳಿಸಲು ಸಮಯದ ಮಿತಿಯನ್ನು ಸಹ ನೀಡಲಾಗಿತ್ತು. ಗಹನಾ ನಿಗದಿತ ಸಮಯದೊಳಗೆ ಯಾವುದೇ ತಡವರಿಕೆ ಇಲ್ಲದೆ ಶ್ಲೋಕವನ್ನು ಪೂರ್ಣಗೊಳಿಸಿದ್ದು, ಆ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ.
ಬೆಳ್ಳಂಪಳ್ಳಿ ನಿವಾಸಿ ಶ್ವೇತಾ ಮತ್ತು ಮಧುರ್ ರಾಜ್ ಶೆಟ್ಟಿಗಾರ್ ಅವರ ಪುತ್ರಿ ಗಹನಾ ಮಾನಸಿ ಬೆಂಗಳೂರಿನ ಶಾಲೆಯೊಂದರಲ್ಲಿ ಯುಕೆಜಿ ಓದುತ್ತಿದ್ದಾರೆ.
PublicNext
23/01/2021 02:54 pm