ನವದೆಹಲಿ: ಸಿಬಿಎಸ್ ಇ 10 ಹಾಗೂ 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಮೇ 4ರಿಂದ ಜೂನ್ 10ರ ವರೆಗೆ ನಡೆಯಲಿದ್ದು, ಜುಲೈ 15ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂತ್ ಹೇಳಿದ್ದಾರೆ.
ಈ ಕುರಿತು ಇಂದು (ಗುರುವಾರ) ಮಾತನಾಡಿದ ಅವರು, ಶಾಲೆಗಳು ಹತ್ತು ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಯೋಗ, ಪ್ರಾಜೆಕ್ಟ್ ಹಾಗೂ ಇಂಟರ್ ನಲ್ ಅಸೆಸ್ಮೆಂಟ್ ಗಳನ್ನು ಮಾರ್ಚ್ 1ರಿಂದ ನಡೆಸಬಹುದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯನ್ನು ಸಿಬಿಎಸ್ ಇ ಶೀಘ್ರದಲ್ಲಿಯೇ ಹೊರಡಿಸಲಿದೆ ಎಂದು ಹೇಳಿದರು.
ದೇಶದಲ್ಲಿ ಕೊರೊನಾ ವೈರಸ್ ಸ್ಫೋಟವಾದ ಹಿನ್ನೆಲೆಯಲ್ಲಿ, ಶಿಕ್ಷಣ ಸಚಿವಾಲಯ ಈ ಹಿಂದೆ ಸಿಬಿಎಸ್ ಇ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿತ್ತು.
ಸಾಮಾನ್ಯವಾಗಿ ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತವೆ ಮತ್ತು ಪ್ರತಿ ವರ್ಷ ಫೆಬ್ರವರಿತಿಂಗಳಲ್ಲಿ ಸಿದ್ಧಾಂತ ಪರೀಕ್ಷೆಗಳು ಆರಂಭವಾಗಿ ಮಾರ್ಚ್ ನಲ್ಲಿ ಮುಕ್ತಾಯವಾಗುತ್ತವೆ.
ಸಿಬಿಎಸ್ ಇ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಆಫ್ ಲೈನ್ ನಲ್ಲಿ ನಡೆಸಲಾಗುತ್ತದೆ.
PublicNext
31/12/2020 07:38 pm