ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಚಿಕ್ನಿ ಚಮೇಲಿ’ ಐಟಂ ಸಾಂಗ್ ಗೆ ಸಖತ್ ಆಗಿ ಸೊಂಟ ಬಳುಕಿಸಿದ ವಿದ್ಯಾರ್ಥಿನಿ : ವಿಡಿಯೋ ವೈರಲ್

ನವದೆಹಲಿ: ವಿದ್ಯಾರ್ಥಿನಿಯೋರ್ವಳು ಹುಡುಗರ ಎದುರೇ ಐಟಂ ಸಾಂಗ್ ವೊಂದಕ್ಕೆ ಸೊಂಟ ಬಳುಕಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹೌದು ವಿದ್ಯಾರ್ಥಿನಿಯೊಬ್ಬಳು ತರಗತಿಯೊಳಗೆ ತನ್ನ ಸಹಪಾಠಿಗಳ ಎದುರು ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಅವರ “ಚಿಕ್ನಿ ಚಮೇಲಿ” ಐಟಂ ಸಾಂಗ್ ಗೆ ಸಖತ್ ಆಗಿ ಸೊಂಟ ಬಳುಕಿಸಿದ್ದಾಳೆ. ವಿಡಿಯೋದಲ್ಲಿ ವಿದ್ಯಾರ್ಥಿನಿಯ ಹಿಂದಿರುವ ಬೋರ್ಡ್ ನ ಮೇಲೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ಬರೆಯಲಾಗಿದೆ.

ಶಿಕ್ಷಕರ ದಿನದಂದೇ ವಿದ್ಯಾರ್ಥಿನಿ ತನ್ನ ಪ್ರತಿಭೆಯನ್ನು ಸಹಪಾಠಿಗಳ ಎದುರು ಪ್ರದರ್ಶನ ಮಾಡಿದ್ದಾಳೆ. ಹುಡುಗಿ ಕುಣಿದಿರುವ ರೀತಿಗೆ ಇಡೀ ತರಗತಿಯ ಹುಡುಗರು ಹುಚ್ಚೆದು ಕುಣಿದಿದ್ದು, ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ವಿಡಿಯೋವನ್ನು ಯಾವ ಶಿಕ್ಷಣ ಸಂಸ್ಥೆಯಲ್ಲಿ? ಯಾವಾಗ? ಸೆರೆಹಿಡಿಯಲಾಗಿದೆ ಎಂಬುದರ ಮಾಹಿತಿ ಇಲ್ಲ. ಆದರೆ, ಹುಡುಗಿ ತುಂಬಾ ಬೋಲ್ಡ್ ಆಗಿ ಸೊಂಟ ಬಳುಕಿಸಿರುವ ರೀತಿಗೆ ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ.

Edited By : Nirmala Aralikatti
PublicNext

PublicNext

14/09/2022 05:47 pm

Cinque Terre

119.75 K

Cinque Terre

10

ಸಂಬಂಧಿತ ಸುದ್ದಿ