ಯುಜಿಸಿಇಟಿ -2022 ರಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಕುರಿತು ಪ್ರಕಟಣೆ ಹೊರಡಿಸಿರುವ ಕೆಇಎ, ಯುಜಿಸಿಇಟಿ-2022ರ ಅರ್ಜಿ ನಮೂನೆಯಲ್ಲಿ ಅರ್ಹತಾ ಕಂಡಿಕೆ 'ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಮ್, ಎನ್ ಮತ್ತು ಓ ಗಳನ್ನು ಕ್ಲೈಮ್ ಮಾಡಿರುವ ಅಭ್ಯಥಿಗಳ ದಾಖಲೆ ಪರಿಶೀಲನೆಗೆ ಹಾಜರಾಗುವ ಕುರಿತು ದಿನಾಂಕವನ್ನು ಪ್ರಕಟಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಪ್ರಕಟಣೆಯಲ್ಲಿ, ಅರ್ಹತಾ ಕಂಡಿಕೆ 'ಎ' ಮತ್ತು 'ಬಿ' ಅಭ್ಯರ್ಥಿಗಳಿಗೆ ಯುಜಿಸಿಇಟಿ 2022ರ ವೃತ್ತಿಪರ ಕೋರ್ಸ್ ಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಯನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತಿದೆ. ಉಳಿದ ಅರ್ಹತಾ ಕಂಡಿಕೆಯನ್ನು ಕ್ಲೈಮ್ ಮಾಡಿರುವ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಯನ್ನು ಆಫ್ ಲೈನ್ ಮುಖಾಂತರ ನಡೆಸಲು ನಿರ್ಧರಿಸಿದೆ.
ದಿನಾಂಕ 14-09-2022 ರಿಂದ 16-09-2022 ರ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ನಡೆಸಲಾಗುವುದು.
ಆಫ್ ಲೈನ್ ಮೂಲಕ ದಾಖಲಾತಿ ಪರಿಶೀಲನೆಗೆ ದಿನಾಂಕ ಮತ್ತು ಶ್ರೇಣಿಯ ವಿವರ
• 14-09-2022- 1ನೇ ರ‍್ಯಾಂಕ್ ನಿಂದ 35,000 ನೇ ರ‍್ಯಾಂಕ್ ವರೆಗೆ.
• 15-09-2022 - 35,001 ನೇ ರ‍್ಯಾಂಕ್ ನಿಂದ 100000 ನೇ ರ‍್ಯಾಂಕ್ ವರೆಗೆ.
• 16-09-2022 - 100001 ನೇ ರ‍್ಯಾಂಕ್ ನಿಂದ, ಕೊನೆಯ ರ‍್ಯಾಂಕ್ ವರೆಗೆ.
ಈ ಶ್ರೇಯಾಂಕದಲ್ಲಿರುವ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು, ದಿನಕ್ಕೆ ಮೂರು ಸೆಷೆನ್ ನಲ್ಲಿ ಆಫ್ ಲೈನ್ ಮೂಲಕ ದಾಖಲಾತಿ ಪರಿಶೀಲನೆಯನ್ನು ನಡೆಸಲಾಗುತ್ತದೆ. ಇನ್ನು ಆರ್.ಡಿ ಸಂಖ್ಯೆ ತಾಳೆಯಾಗದೇ ತಿರಸ್ಕೃತವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಆರ್.ಡಿ ಸಂಖ್ಯೆ ತಿದ್ದುಪಡಿ ಮಾಡಲು 09-09-2022ರ ರಾತ್ರಿ 10.00ರ ವರೆಗೆ ಸಮಯಾವಕಾಶ ನೀಡಲಾಗಿದೆ.
PublicNext
15/09/2022 10:34 am