ಬೆಂಗಳೂರು: ಕೆಲದಿನಗಳ ಹಿಂದೆ ಬಂದ ಸಿಇಟಿ ರಿಸೆಲ್ಟ್ ವಿಚಾರದಲ್ಲಿ ನೊಂದ ವಿದ್ಯಾರ್ಥಿಗಳು ಅಸಾಮಾಧಾನ ಹೊರಹಾಕಿದ್ದಾರೆ. ಈ ವಿಚಾರದ ಸಂಬಂಧ ಬೆಳಗ್ಗೆ ಕೆ.ಇ.ಎ ಬೋರ್ಡ್ ನಲ್ಲಿ ಧರಣಿ ನಡೆಸಿದ್ದ ವಿದ್ಯಾರ್ಥಿಗಳು ಈಗ ಪತ್ರಿಕಾಗೋಷ್ಠಿ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರ್ಯಾಕಿಂಗ್‌ನಲ್ಲಿ ಈ ಬಾರಿ ೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. ಆದರೆ ಅಕಾಡೆಮಿಕ್ ಸ್ಕೋರ್‌ನ್ನ ಸಿಇಟಿ ಫಲಿತಾಂಶದಲ್ಲಿ ಸೇರ್ಪಡೆಗೊಳಿಸಿಲ್ಲ. ಫಲಿತಾಂಶ ಬಂದಮೇಲೆ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಶ್ನೆಗಳಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಿಇಟಿ ಫಲಿತಾಂಶವನ್ನು ಮತ್ತೆ ಅಕಾಡೆಮಿಕ್ ಮಾರ್ಕ್ಸ್ ಸೇರಿಸಿ ಪ್ರಕಟ ಮಾಡಬೇಕು. ಇಲ್ಲ ಕಳೆದ ವರ್ಷದಂತೆ ಫಲಿತಾಂಶ ಪ್ರಕಟ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಫಲಿತಾಂಶ ಮತ್ತೆ ಪ್ರಕಟಿಸದೇ ಹೋದಲ್ಲಿ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ನ್ಯಾಯ ಸಿಗಬೇಕು, ವಿದ್ಯಾರ್ಥಿಗಳು ನಡುವೆ ತಾರತಮ್ಯ ಯಾಕೆ ? ಪ್ರತಿಭಟನೆಯಿಂದ ನಮಗೆ ನ್ಯಾಯ ದೊರೆಯದಿದ್ದಲ್ಲಿ ಕಾನೂನು ಮೂಲಕ ಹೋರಾಡಲು ಸಿದ್ದರಿದ್ದೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
PublicNext
01/08/2022 07:22 pm