ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಪಿಯುಸಿ ಕಾಲೇಜು ಆರಂಭ; ತರಗತಿಗಳಲ್ಲಿ ಸಮವಸ್ತ್ರ ಕಡ್ಡಾಯ, ಹಿಜಾಬ್​ಗೆ ನಿರ್ಬಂಧ

ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಸಕ್ತ ಸಾಲಿನ ತರಗತಿಗಳು (2022-23 ) ಇಂದಿನಿಂದ ಆರಂಭವಾಗಿದೆ. ಹಿಜಾಬ್ ಪ್ರಕರಣದ ತೀರ್ಪಿನ ಬಳಿಕ ಮತ್ತೆ ಪಿಯು ಕಾಲೇಜು ಆರಂಭವಾಗಿದ್ದು, ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸಿದ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ.

ಹಿಜಾಬ್ ಘಟನೆ ಮರುಕಳಿಸದಂತೆ ಶಾಲೆ ಆರಂಭದಲ್ಲೇ ಎಚ್ಚರಕೆ ಹೆಜ್ಜೆಯನ್ನು ಶಿಕ್ಷಣ ಇಲಾಖೆ ಇಟ್ಟಿದೆ. ಒಂದು ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಅಥವಾ ಕಾಲೇಜು ಯಾವುದೇ ಸಮವಸ್ತ್ರ ಸೂಚಿಸದಿದ್ದರೇ, ಸಮಾನತೆ, ಏಕತೆ ಕಾಪಾಡುವ ಸಾರ್ವಜನಿಕ ಸುವ್ಯವಸ್ಥಿಗೆ ದಕ್ಕೆ ಆಗದ ರೀತಿಯಲ್ಲಿ ಉಡುಪು ಧರಿಸಬೇಕೆಂದು ಮಾರ್ಗ ಸೂಚಿಯಲ್ಲಿ ತಿಳಿಸಿದೆ.

ಪದವಿ ಪೂರ್ವ ತರಗತಿಗಳಿಗೆ ಜೂನ್ 1ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ದಂಡ ಶುಲ್ಕ ವಿಲ್ಲದೇ ದಾಖಲಾತಿ ಪಡೆಯಲು ಜೂನ್ 15. ಕೊನೆಯ ದಿನ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30 ರವೆರೆಗೆ ದಾಖಲಾತಿ ಪ್ರಕ್ರಿಯೆ ನಡೆಯಲಿದೆ.

10.30 ರಿಂದ 4.30 ರವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇನ್ನೂ ಜೂನ್ 9 ರಿಂದ ಸೆ.30 ರವರೆಗೆ ಶೈಕ್ಷಣಿಕ ವರ್ಷದ ಮೊದಲ ಅವಧಿ ನಡೆಯಲಿದೆ. ಆ. 13 ರಿಂದ 2023 ಮಾರ್ಚ್ 31 ರವರೆಗೆ ಎರಡನೇ ಅವಧಿ ಜರುಗಲಿದೆ. ಅ.1 ರಿಂದ 12 ವರೆಗೆ ಮಧ್ಯಂತರ ರಜೆ ಹಾಗೂ ಮಾರ್ಚ್ 2023 ಏಪ್ರಿಲ್ 1 ರಿಂದ ಬೇಸಿಗೆ ರಜೆ ನಿಗದಿ ಮಾಡಲಾಗಿದೆ.

Edited By : Vijay Kumar
PublicNext

PublicNext

09/06/2022 11:29 am

Cinque Terre

33.85 K

Cinque Terre

0

ಸಂಬಂಧಿತ ಸುದ್ದಿ