ಬೆಂಗಳೂರು: ಇಂದಿನಿಂದ ಎಸ್‍ಎಸ್‍ಎಲ್‌ಸಿ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ಏಪ್ರಿಲ್ 11ರವರೆಗೆ ನಡೆಯಲಿದೆ. ಎರಡು ವರ್ಷ ಕೊರೊನಾ ರೌದ್ರತೆಯ ಬಳಿಕ ಪೂರ್ಣ ಪ್ರಮಾಣದಲ್ಲಿ ಹಳೆಯ ಮಾದರಿಯಲ್ಲಿ ಈ ವರ್ಷ ಪರೀಕ್ಷೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಪರೀಕ್ಷೆಗೆ ಸರ್ಕಾರ ಸಮವಸ್ತ್ರ ನಿಯಮ ಕಡ್ಡಾಯ ಮಾಡಿದೆ. ಎಕ್ಸಾಂಗೆ ಹಿಜಾಬ್ ನಿಷೇಧ ಮಾಡಲಾಗಿದೆ. ಹೈಕೋರ್ಟ್ ಆದೇಶದ ಮೇಲೆ ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಭಾವನೆ ವಸ್ತ್ರಗಳಿಗೆ ಅವಕಾಶ ಇಲ್ಲ. ಸರ್ಕಾರಿ ಶಾಲಾ ಮಕ್ಕಳು ಸರ್ಕಾರ ನಿಗದಿ ಮಾಡಿದ ಸಮವಸ್ತ್ರ ಧರಿಸೋದು ಕಡ್ಡಾಯ ಮಾಡಿದೆ.
PublicNext
28/03/2022 08:09 am