ನವದೆಹಲಿ: ದೇಶದಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯ 8,000 ಸೀಟುಗಳು ಖಾಲಿ ಉಳಿದಿರುವ ಹಿನ್ನೆಲೆಯಲ್ಲಿ, ನೀಟ್-ಪಿಜಿ 2021ರ ಕಟ್ ಆಫ್ ನ್ನು 15 ಪರ್ಸಂಟೈಲ್ ಕಡಿಮೆ ಮಾಡಿದೆ.
ಆರೋಗ್ಯ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗದೊಂದಿಗೆ ಚರ್ಚೆ, ಸಮಾಲೋಚನೆ ನಡೆಸಿದ ಬಳಿಕ ಎಲ್ಲಾ ಕೆಟಗರಿಯಲ್ಲಿ ಶೇಕಡಾ 15 ರಷ್ಟು ಅಂಕ ಇಳಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಸದಸ್ಯ ಕಾರ್ಯದರ್ಶಿ ಬಿ. ಶ್ರೀನಿವಾಸ್, ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ ಬಿಇ) ಕಾರ್ಯಕಾರಿ ನಿರ್ದೇಶಕ ಮಿನು ಬಾಜ್ ಪೈ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಇದರಿಂದಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಕಟ್ ಆಫ್ 35ನೇ ಪರ್ಸಂಟೈಲ್, ಸಾಮಾನ್ಯ ವರ್ಗದ ಅಂಗವಿಕಲ ವಿದ್ಯಾರ್ಥಿಗಳ ಕಟ್ ಆಫ್ 30ನೇ ಪರ್ಸಂಟೈಲ್ ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಒಬಿಸಿ ವಿದ್ಯಾರ್ಥಿಗಳ ಕಟ್ ಆಫ್ 25ನೇ ಪರ್ಸಂಟೈಲ್ ಆಗಲಿದೆ.
PublicNext
13/03/2022 03:41 pm