ಜಾರ್ಖಂಡ್ : ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ 12 ವರ್ಷದ ಬಾಲಕನೊಬ್ಬ ವರದಿಗಾರಿಕೆ ಮಾಡಿ ಸುದ್ದಿಯಾಗಿರುವ ಘಟನೆ ಜಾರ್ಖಂಡ್ ನ ಗೊಡ್ಡ ಜಿಲ್ಲೆಯ ಮಹಾಗಾಮಾ ಬ್ಲಾಕ್ ನ ಭೀಖಿಯಾಛಕ್ ಗ್ರಾಮದಲ್ಲಿ ನಡೆದಿದೆ.ಹೌದು ಜಾರ್ಖಂಡ್ ನ,ಗೊಡ್ಡಾದ ಸರ್ಫರಾಜ್ ಜಾನ್ ಖಾಲಿ ಕೋಕ್ ಬಾಟಲಿಯ ಮೇಲೆ ಕೋಲನ್ನು ಹಾಕಿಕೊಂಡು,ವರದಿಗಾರನಂತೆ ತನ್ನ ಶಾಲೆಯ ಸುತ್ತಲೂ ಹೋಗಿ ಅಲ್ಲಿನ ದುಸ್ಥಿತಿಯನ್ನು ಜನರಿಗೆ ತೋರಿಸಿದ್ದಾನೆ.
ಸದ್ಯ ಸರ್ಪರಾಜ್ ರೆಕಾರ್ಡ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಬಾಲಕನನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ.ವರದಿಗಾರನಂತೆ ತನ್ನ ಕ್ಲಾಸ್ ಮೇಟ್ ಗಳಿಗೆ ಪ್ರಶ್ನೆ ಕೇಳಿದ್ದಾನೆ, ಹಾಗೂ, ವಿಡಿಯೋವನ್ನು ರೆಕಾರ್ಡ್ ಮಾಡಲು ಸಹ ಗೆಳೆಯರನ್ನು ಬಳಸಿಕೊಂಡಿದ್ದಾನೆ.
ಸದ್ಯ ಪೋರ ಮಾಡಿದ ವರದಿ ಆ ರಾಜ್ಯದ ಶಿಕ್ಷಣ ಸಚಿವರು ಇತ್ತ ಕಡೆ ಗಮನ ಹರಿಸುವಂತೆ ಮಾಡಿದೆ.
PublicNext
08/08/2022 04:48 pm