ಬೆಂಗಳೂರು: ಕೊರೊನಾದಿಂದ ಕಂಗಾಲಾಗಿರುವ ಸರ್ಕಾರ ಪ್ರಸಕ್ತ ವರ್ಷದ ಶೈಕ್ಷಣಿಕ ಕ್ರೇತ್ರದಲ್ಲಿ ಭಾರಿ ಬದಲಾವಣೆಗಳನ್ನಾ ತಂದಿದೆ.
ಸದ್ಯ ಮಕ್ಕಳಿಗೆ ಮಧ್ಯಾಹ್ನ ಪೂರೈಕೆಯಾಗುತ್ತಿರುವ ಬಿಸಿಯೂಟಕ್ಕೆ ಬ್ರೇಕ್ ಹಾಕಿರುವ ಸರ್ಕಾರ ಆಹಾರ ಧಾನ್ಯಗಳ ಪೂರೈಕೆಗೆ ಮುಂದಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಯಥಾಪ್ರಕಾರ ಬಿಸಿಯೂಟ ಯೋಜನೆ ಆರಂಭಗೊಳ್ಳಲಿದೆ.
ಜನವರಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಜ. 1 ರಿಂದ ವಿದ್ಯಾಗಮ ಮರು ಆರಂಭವಾಗಲಿದೆ.
ವಿದ್ಯಾಗಮ ತರಗತಿ ಶಾಲಾ ವಠಾರದಲ್ಲಿ ನಡೆದರೂ ಬಿಸಿಯೂಟ ನೀಡುವುದಿಲ್ಲ. ಬದಲಿಗೆ ಆಹಾರ ಧಾನ್ಯ ವಿತರಿಸುತ್ತೇವೆ ಎಂದು ಶಿಕ್ಷಣ ಇಲಾಖೆ ನ್ಯಾಯಾಲಯಕ್ಕೂ ಮಾಹಿತಿ ನೀಡಿದೆ.
ಜೂನ್ ನಿಂದ ಅಕ್ಟೋಬರ್ ವರೆಗಿನ ಆಹಾರ ಸಾಮಗ್ರಿಯನ್ನು ಶಾಲೆಗಳ ಮೂಲಕ ವಿತರಿಸಲಾಗಿದೆ.
ಜನವರಿಯಿಂದ ಪ್ರತೀ ಮಗುವಿಗೆ ದಿನದ ಲೆಕ್ಕಾಚಾರದಲ್ಲಿ ಬಿಸಿಯೂಟದ ಸಾಮಗ್ರಿಯನ್ನು ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ನೀಡಲಾಗುತ್ತದೆ ಎಂದು ಇಲಾಖೆಯ ಬಿಸಿಯೂಟ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
1ರಿಂದ 5ನೇ ತರಗತಿ: ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ, 58 ಗ್ರಾಂ ತೊಗರಿ ಬೇಳೆ, 6ರಿಂದ 10ನೇ ತರಗತಿ: ದಿನಕ್ಕೆ 150 ಗ್ರಾಂ ಅಕ್ಕಿ ಅಥವಾ ಗೋಧಿ, 87 ಗ್ರಾಂ ತೊಗರಿ ಬೇಳೆ
PublicNext
19/12/2020 07:40 am