ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಭಿಕ್ಷಾಟನೆಯಲ್ಲಿ ತೊಡಗಿದ್ದವರ ರಕ್ಷಣೆ: ನಿರಾಶ್ರಿತರ ಕೇಂದ್ರಕ್ಕೆ ರವಾನೆ

ದಾವಣಗೆರೆ: ತಾಲ್ಲೂಕಿನ ತುರ್ಚಘಟ್ಟದ ನಿರಾಶ್ರಿತರ ಕೇಂದ್ರದ ವತಿಯಿಂದ ನಗರದಲ್ಲಿ ಭಿಕ್ಷಾಟನೆ ನಿಷೇಧ ಅಧಿನಿಯಮ - 1975 3ನೇ ಸೆಕ್ಷನ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಿರಾಶ್ರಿತರ ಕೇಂದ್ರದ ಪರಿಹಾರ ಸಮಿತಿ ಅಧ್ಯಕ್ಷರು, ಮಾಜಿ ಶಾಸಕರಾದ ಎಂ.ಬಸವರಾಜ್ ನಾಯಕ್ ನೇತೃತ್ವದಲ್ಲಿ, ಮಧ್ಯಾಹ್ನ ನಗರ ಪಾಲಿಕೆ ಮುಂಭಾಗ, ಹೈಸ್ಕೂಲ್ ಮೈದಾನದಲ್ಲಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಅರುಣ ಚಿತ್ರಮಂದಿರದ ವೃತ್ತದ ಬಳಿ ಕಾರ್ಯಾಚರಣೆ ನಡೆಯಿತು.

ಶಾಮನೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಕಾರ್ಯಾಚರಣೆ ವೇಳೆ ಇಬ್ಬರು ಪುರುಷರು, ಆರು ಮಂದಿ ಮಹಿಳೆಯರು ಸೇರಿ ಒಟ್ಟು 8 ಮಂದಿ ಮತ್ತು ಒಂದು ಮಗುವನ್ನು ವಶಕ್ಕೆ ಪಡೆದು ಭಿಕ್ಷಾಟನೆಯಿಂದ ರಕ್ಷಿಸಿ, ನಿರಾಶ್ರಿತರ ಕೇಂದ್ರಕ್ಕೆ ಕರೆದ್ಯೊಯಲಾಯಿತು.

ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟವರಿಗೆ ನಿರಾಶ್ರಿತರ ಕೇಂದ್ರದಲ್ಲಿ ಊಟ, ವಸತಿ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾಡಲಾಗುವುದು. 40-50 ಮಂದಿಯನ್ನು ಈಗಾಗಲೇ ಮರಳಿ ಮನೆಗೆ ಕಳಿಸಲಾಗಿದೆ ಎಂದು ನಿರಾಶ್ರಿತರ ಕೇಂದ್ರದ ಅಧೀಕ್ಷಕ ಕೆ.ಆರ್. ಕಾಶೀನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರೇಷ್ಮಾ ಕೌಸರ್ ಸೇರಿದಂತೆ ಇತರರು ಇದ್ದರು.

Edited By : Somashekar
PublicNext

PublicNext

10/10/2022 05:16 pm

Cinque Terre

37.26 K

Cinque Terre

0