ದಾವಣಗೆರೆ : ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಗ್ರಾಮದಲ್ಲಿ ಅವಾಂತರ ಸೃಷ್ಟಿ ಮಾಡಿದ್ದು, ರೈತರು ಪರಿಹಾರಕ್ಕಾಗಿ ಆಗ್ರಿಹಿಸುತ್ತಿದ್ದಾರೆ. ಸುಮಾರು 1.50 ಲಕ್ಷ ಖರ್ಚು ಮಾಡಿ 15 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದೆ. ಮಳೆಗೆ ಎಲ್ಲವೂ ಕೊಚ್ಚಿಕೊಂಡು ಹೋಗಿದ್ದು, 15 ಕ್ವಿಂಟಲ್‌ನಷ್ಟು ಉತ್ಪನ್ನವೂ ಕೈಗೆ ಸಿಗುವುದಿಲ್ಲ. ಯಾವ ಅಧಿಕಾರಿಗಳೂ ನಮ್ಮ ಭೂಮಿಗೆ ಭೇಟಿ ನೀಡಿಲ್ಲ. ಕೂಡಲೇ ನಮಗೆಲ್ಲ ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕೆರೆಯಾಗಳಹಳ್ಳಿ ರೈತ ಪರಮಾನಾಂದ ಅವರು ಒತ್ತಾಯಿಸಿದರು.
‘ಮಳೆಯಿಂದಾಗಿ ಬೆಳೆ ಕೊಚ್ಚಿ ಹೋಗಿದೆ. ತಹಶೀಲ್ದಾರರನ್ನು ಕೇಳಿದರೆ ನಿಮ್ಮ ಅಕೌಂಟ್‌ಗೆ ಪರಿಹಾರವನ್ನು ಜಮಾ ಮಾಡಿದ್ದೇವೆ
ಎಂದು ಹೇಳುತ್ತಾರೆ. ನಮಗೋ ಒಂದು ರೂಪಾಯಿ ಪರಿಹಾರವೂ ಬಂದಿಲ್ಲ’ ಎಂದು ಅಣಜಿಯ ರೈತ ಶ್ರೀನಿವಾಸ್ ತಿಳಿಸಿದರು.
‘ಅಣಜಿ ಹಾಗೂ ರಾಜನಕೆರೆಗಳ ನೀರು ನುಗ್ಗಿ ಒಂದು ಸಾವಿರ ಎಕರೆಯಷ್ಟು ಬೆಳೆ ಕೊಚ್ಚಿಕೊಂಡು ಹೋಗಿದೆ’ ಎಂದು ಅಣಜಿ ಗ್ರಾಮದ ಕೊಟ್ರೇಶ್ ಅಳಲು ತೋಡಿಕೊಂಡರು.
‘ಅಂದಾಜು 1 ಲಕ್ಷ ಖರ್ಚು ಮಾಡಿ 6 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಕೊಯ್ಲಿಗೆ ಬಂದಿತ್ತು. ಅಷ್ಟರಲ್ಲೇ ಮಳೆ
ಸುರಿದು ಬೆಳೆ ಕೊಚ್ಚಿಕೊಂಡು ಹೋಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆನಗೋಡಿನ ರೈತ ಮರುಳಸಿದ್ದಪ್ಪ ನೋವಿನಿಂದ ಹೇಳಿದರು.
PublicNext
12/10/2022 03:30 pm