ದಾವಣಗೆರೆ: ರೀಲ್ಸ್ ಮಾಡಲು ಹೋಗಿ ಇಬ್ಬರು ಯುವಕರು ಚೆಕ್ ಡ್ಯಾಂನಲ್ಲಿ ಕಣ್ಮರೆಯಾಗಿರುವ ಘಟನೆ ದಾವಣಗೆರೆ ತಾಲ್ಲೂಕಿನ ಹರಿಹರ ತಾಲೂಕಿನ ಹರಗನಹಳ್ಳಿ ಚೆಕ್ ಡ್ಯಾಂ ನಲ್ಲಿ ನಡೆದಿದೆ.
ಹರಿಹರ ಆಶ್ರಯ ಬಡಾವಣೆಯ ಪವನ್ (25), ಪ್ರಕಾಶ್ (24) ಇಬ್ಬರು ನಾಪತ್ತೆಯಾಗಿರುವ ಸ್ನೇಹಿತರು. ಇಬ್ಬರು ರೀಲ್ಸ್ ಮಾಡಲು ಚೆಕ್ ಡ್ಯಾಂಗೆ ಹೋಗಿದ್ದರು. ಈ ವೇಳೆ ಪ್ರಕಾಶ್ ನೀರಲ್ಲಿ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋಗಿದ್ದ ಪವನ್ ಸಹ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಬಳಿಕ ಅವರಿಬ್ಬರಿಗಾಗಿ ಶೋಧ ನಡೆಸಲಾಗುತ್ತಿತ್ತು. ಆದರೆ, ಇಂದು ಹರಿಹರ ಹೊರಭಾಗದ ರಾಘವೇಂದ್ರ ಮಠದ ಬಳಿ ಓರ್ವನ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಮತ್ತೊಬ್ಬನ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಹರಿಹರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
01/10/2022 07:12 pm