ದಾವಣಗೆರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿದ್ದ ಆರೋಪಿಯನ್ನು ಜಗಳೂರು ತಾಲೂಕಿನ ಬಿಳಚೋಡು ಪೊಲೀಸರು ಬಂಧಿಸಿದ್ದಾರೆ.
ಜಗಳೂರಿನ 24 ವರ್ಷದ ಅಂಜಿನಪ್ಪ ಎಂಬಾತನನ್ನು ಬಂಧಿಸಿದ್ದು, ಒಟ್ಟು ಅಂದಾಜು ಬೆಲೆ ಸುಮಾರು 1,46,000 ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹುಚ್ಚಂಗಿಪುರದ ಕೊಲ್ಲಪ್ಪ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಬಿಳಿಚೋಡು ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.
Kshetra Samachara
26/09/2022 07:44 pm