ದಾವಣಗೆರೆ: ಬ್ಯಾಂಕ್ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ಛತ್ರಪತಿ ಆರ್. ಅಲಿಯಾಸ್ ಶಿವಾಜಿ ಹಾಗೂ ಹೊಳಲ್ಕೆರೆಯ ದಾದಪೀರ್ ಅಲಿಯಾಸ್ ದಾದಾ ಬಂಧಿತ ಆರೋಪಿಗಳು. ವಡ್ಡನಹಳ್ಳಿ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ- 48ರ ಫ್ಲೈ ಓವರ್ ಬ್ರಿಡ್ಜ್ ಬಳಿ ಕಾರೊಂದರಲ್ಲಿ ಕುಳಿತು ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ವೇಳೆ ಶಿವಾಜಿ ಹಾಗೂ ದಾದಾ ಸಿಕ್ಕಿಬಿದ್ದಿದ್ದು, ಕಾರಿನಲ್ಲಿದ್ದ ನಾಲ್ವರು ಪರಾರಿ ಆಗಿದ್ದಾರೆ.
ಆರೋಪಿತರ ಬಳಿ ಇದ್ದ ಕಾರು ಪರಿಶೀಲಿಸಿದಾಗ ಕಬ್ಬಿಣದ ಒಂದು ಲಾಂಗ್, ಬ್ಲೇಡ್ ಸಮೇತ ಆಕ್ಸೆಲ್ ಬ್ಲೇಡ್ ಕಟ್ಟರ್, ಒಂದು ಕಬ್ಬಿಣದ ರಾಡ್, ಕಟ್ಟಿಂಗ್ ಪ್ಲೇಯರ್, ಟಾರ್ಚ್, ಖಾರದ ಪುಡಿ ಪಾಕೆಟ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಈ ಹಿಂದೆ ದಾವಣಗೆರೆ ಗ್ರಾಮಾಂತರ ಠಾಣೆಯ 3, ಹರಿಹರ ಗ್ರಾಮಾಂತರ ಠಾಣೆಯ 1 ಮತ್ತು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಗ್ರಾಮಾಂತರ ಠಾಣೆಯ 2 ಪ್ರಕರಣಗಳು ಸೇರಿದಂತೆ ಒಟ್ಟು 16 ಪ್ರಕರಣಗಳಲ್ಲಿ ಬ್ಯಾಂಕ್ ಮತ್ತು ಎ.ಟಿ.ಎಂ ಗಳ ದರೋಡೆ ಪ್ರಕರಣಗಳು ಪತ್ತೆಯಾಗಿವೆ.
ಕೃತ್ಯಕ್ಕೆ ಬಳಸಿದ ಅಂದಾಜು 8 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸುಜುಕಿ ಎರಿಟಿಗಾ ಕಾರನ್ನು ವಶಪಡಿಸಿಕೊಂಡು ನಂತರ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
20/09/2022 12:46 pm