ಪಾವಗಡ: ತಾಲೂಕಿನಲ್ಲಿ ಶನಿವಾರ ನಾಗಲಮಡಿಕೆ ಹೋಬಳಿಯ ನಾಗಲಿಮಡಿಕೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ರಾತ್ರಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮಸ್ಥರ ಜೊತೆ ಭಜನೆಯಲ್ಲಿ ಪಾಲ್ಗೊಂಡು ವಿಧಾನ ಎಲ್ಲರ ಗಮನ ಸೆಳೆದರು.
ಸುಪ್ರಸಿದ್ಧ ಅಂತ್ಯ ಸುಬ್ರ ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಭಜನೆಯಲ್ಲಿ ಪಾಲ್ಗೊಂಡು ಅವರು ಗ್ರಾಮಸ್ಥರೊಂದಿಗೆ ತಟಮೆ ಬಾರಿಸಿದರು. ಒಟ್ಟಾರೆ ಖುಷಿಯಿಂದ ಗ್ರಾಮಸ್ಥರ ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿ ಗ್ರಾಮಸ್ಥರೊಂದಿಗೆ ಖುಷಿ ನೀಡಿದರು. ಉಪವಿಭಾಗಾಧಿಕಾರಿಗೆ ನಡೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
PublicNext
17/07/2022 09:58 pm