ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಧಿತ ಕನ್ನಡಿಗರ ಬಿಡುಗಡೆ, ಸನ್ಮಾನ

ಬೆಳಗಾವಿ : ಬೆಳಗಾವಿಯಲ್ಲಿ ಎಂಇಎಸ್ ಮುಖಂಡನ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಬಂಧಿತರಾಗಿದ್ದ ನಾಲ್ವರು ಕನ್ನಡಿಗರನ್ನು ಇಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ದೇಸಾಯಿ, ಅನಿಲ್ ದಡ್ಡಿಮನಿ, ಸಚಿನ್ ಮಠದ, ರಾಹುಲ್ ಕಲಕಾಂಬಕರ್ ಬಿಡುಗಡೆಯಾದವರು. ಇನ್ನು ಜೈಲಿನಿಂದ ಬಿಡುಗಡೆಯಾದ ನಾಲ್ವರು ಕನ್ನಡ ಹೋರಾಟಗಾರರಿಗೆ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಜೈಲಿನ ಎದುರು ಸನ್ಮಾನಿಸಿ ಸ್ವಾಗತಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಕಾರ್ಯಕರ್ತರಿಗೆ ಕ್ಷೀರಾಭಿಷೇಕಕ್ಕೆ ಮುಂದಾಗಿದ್ದವರಿಗೆ ಪೊಲೀಸರು ತಡೆದಿದ್ದಾರೆ. ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದದ್ದನ್ನು ವಿರೋಧಿಸಿದ ಎಂಇಎಸ್ ಎಂಇಎಸ್ ಪುಂಡರು ಮಹಾಮೇಳ ನಡೆಸಿದ್ದರು ಈ ವೇಳೆ ಮಹಾಮೇಳ ನಡೆಯುವ ಸ್ಥಳಕ್ಕೆ ನುಗ್ಗಿ ಎಂಇಎಸ್ ಅಧ್ಯಕ್ಷ ದೀಪಕ್ ಧಳವಿ ಮುಖಕ್ಕೆ ಮಸಿ ಬಳಿದಿದ್ದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕೊಲೆಯತ್ನ ಕೇಸ್ ದಾಖಲಿಸಿದ್ದರು.

ಎಂಇಎಸ್ ಮುಖಂಡರು ನೀಡಿದ ದೂರಿನ ಮೇರೆಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಕೂಡಾ ದಾಖಲಾಗಿತ್ತು. ಸದ್ಯ ಬಂಧಿತ ನಾಲ್ವರು ಕನ್ನಡಪರ ಕಾರ್ಯಕರ್ತರಿಗೆ ಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಇಂದು ಅವರನ್ನು ಬಿಡುಗಡೆ ಮಾಡಲಾಗಿದೆ.

Edited By : Shivu K
PublicNext

PublicNext

12/01/2022 09:24 am

Cinque Terre

29.57 K

Cinque Terre

2