ಬೆಳಗಾವಿ:ಕುಂದಾನಗರಿ ಬೆಳಗಾವಿಯಲ್ಲೂ ಕನ್ನಡ ರಾಜ್ಯೋತ್ವದ ಕನ್ನಡದ ಕಂಪು ಕೇಳಿ ಬಂತು. ಅತೀ ಸರಳವಾಗಿಯೇ ಆಚರಿಸಿಲಾದ ಈ ಕನ್ನಡ ಹಬ್ಬದಲ್ಲಿ ಪವರ್ ಸ್ಟಾರ್ ಪುನೀತ್ ಭಾವ ಚಿತ್ರಕ್ಕೆ ಗೌರವ ಸಲ್ಲಿಸಲಾಗಿದೆ.
ಬೆಳಗಾವಿಯ ಚನ್ನಮ್ಮ ಸರ್ಕಲ್ ನಲ್ಲಿ ಕನ್ನಡದ ಕಂಪು ಕೇಳಿ ಬಂತು. ಹಳದಿ-ಕೆಂಪು ಧ್ವಜ ಹಿಡಿದು ಕನ್ನಡಿಗರು ಸಂಭ್ರಮಿಸಿ ಕನ್ನಡ ರಾಜ್ಯೋತ್ಸವ ಆಚರಿಸಿದರು.ಆದರೆ ಇವರ ಜಯ ಘೋಷ ರೊಚ್ಚಿನಿಂದಲೇ ಕೂಡಿತ್ತು.ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ ಅಂತಲೇ ಘೋಷಣೆ ಕೂಗಿದರು.
ಸರಳವಾಗಿಯೇ ಕನ್ನಡ ರಾಜ್ಯೋತ್ಸವ ಆಚರಿಸಿದ ಕನ್ನಡಿಗರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವ ಚಿತ್ರಕ್ಕೂ ಗೌರವ ಸಲ್ಲಿಸಿದರು.
PublicNext
01/11/2021 03:17 pm