ಮೈಸೂರು: ಅದ್ಧೂರಿ ದಸರಾ ಬಳಿಕ ಗಜಪಡೆ ಮರಳಿ ಕಾಡಿನೆಡೆಗೆ ಪ್ರಯಾಣ ಬೆಳೆಸಿವೆ. ಇಂದು ಅರಮನೆಯಂಗಳದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕಾಡಿಗೆ ಬೀಳ್ಕೊಡಲಾಯಿತು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ಪೂಜೆ ಪೂಜೆ ಸಲ್ಲಿಸಲಾಯಿತು. ಅಶ್ವತ್ಥಾಮ, ಗೋಪಾಲಸ್ವಾಮಿ ಧನಂಜಯ, ಚೈತ್ರ, ಕಾವೇರಿ ಲಕ್ಷ್ಮಿ ಆನೆಗಳು ಸೆ. 13ರಂದು ಮೈಸೂರಿಗೆ ಆಗಮಿಸಿದ್ದವು
ಅಭಿಮನ್ಯು ಗೋಪಾಲಸ್ವಾಮಿ ಮತ್ತಿಗೋಡು ಆನೆ ಶಿಬಿರಕ್ಕೆ,ಅಶ್ವತ್ಥಾಮ ದೊಡ್ಡ ಹರವೆ ಆನೆ ಶಿಬಿರಕ್ಕೆ, ವಿಕ್ರಮ ಧನಂಜಯ ಕಾವೇರಿ ದುಬಾರೆ ಆನೆ ಶಿಬಿರಕ್ಕೆ,ಚೈತ್ರ ಹಾಗೂ ಲಕ್ಷ್ಮಿ ಆನೆ ಬಂಡೀಪುರ ಅರಣ್ಯದ ರಾಮಪುರ ಕ್ಯಾಂಪ್ ಗೆ ಕಳುಹಿಸಲಾಯಿತು. ಪೂಜೆ ಬಳಿಕ ಲಾರಿ ಏರಿದ ಗಜಪಡೆ ಮೂಲ ಸ್ಥಾನಕ್ಕೆ ಮರಳಿದವು
PublicNext
17/10/2021 11:36 am