ತುಮಕೂರು- ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬಿಜೆಪಿ ಶಾಸಕ ಡಾ. ಸಿ ಎಂ ರಾಜೇಶ್ ಗೌಡ ರವರು ಫುಲ್ ಜೋಶ ಒಳಗೆ ಡ್ಯಾನ್ಸ್ ಮಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಹೌದು,,,, ಶಿರಾ ನಗರದ ಗವಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಶಾಸಕ ರಾಜೇಶ್ ಗೌಡ ಅವರು, ಮೆರವಣಿಗೆ ಯೊಂದಿಗೆ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು. ಈ ಹಾಜರಿದ್ದ ಶಿರಾ ತಾಲೂಕಿನ ಬಿಜೆಪಿ ಶಾಸಕ ರಾಜೇಶ್ ಗೌಡ ಹಾಗೂ ನಿಗಮ ಮಂಡಳಿ ಅಧ್ಯಕ್ಷರಾದ ಎಸ್ಆರ್ ಗೌಡರವರು ಇಬ್ಬರು ಸೇರಿ ಯುವಕರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ನಾವು ಕೂಡ ಯಾವ ಯುವಕರಿಗೂ ಕಮ್ಮಿ ಇಲ್ಲ ಎಂಬುವಂತೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
26/09/2021 08:59 pm