ದೇಶದ ಜನರಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಓಣಂ ಹಬ್ಬದ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಕಾರಾತ್ಮಕತೆ, ಉತ್ಸಾಹ, ಭ್ರಾತೃತ್ವ ಮತ್ತು ಸಾಮರಸ್ಯವನ್ನು ಸಾರುವ ಓಣಂ ಹಬ್ಬದ ಶುಭಾಶಯಗಳನ್ನು ದೇಶದ ಜನರಿಗೆ ತಿಳಿಸಲು ಬಯಸುತ್ತೇನೆ. ಪ್ರತಿಯೊಬ್ಬರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಓಣಂ ಸಂಭ್ರಮದಲ್ಲಿರುವ ಎಲ್ಲರಿಗೂ ಹಬ್ಬದ ಶುಭಾಶಯಗಳು. ಓಣಂ, ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಆಚರಿಸುವ ಹಬ್ಬವಾಗಿದೆ. ಈ ಶುಭದಿನದಂದು ಪ್ರತಿಯೊಬ್ಬ ನಾಗರಿಕನ ಆಯುರಾರೋಗ್ಯ, ಸಮೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಟ್ವೀಟ್ ಮೂಲಕ ಓಣಂ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಓಣಂ ಹಬ್ಬದ ಈ ಶುಭ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರಿಗೂ ಹಾರ್ದಿಕವಾದ ಶುಭಾಶಯ ಕೋರಿದ್ದಾರೆ.
ಓಣಂ ಮಲಯಾಳಿಗಳಿಗೆ ದೊಡ್ಡ ಹಬ್ಬವಾಗಿದ್ದು, ನಮ್ಮ ದೇಶದಲ್ಲಿ ಕೇರಳದಲ್ಲಿ ಅತ್ಯಂತ ಸಂಭ್ರಮದಿಂದ, ವಿಶೇಷವಾಗಿ ಆಚರಿಸಲ್ಪಡುತ್ತದೆ. ಜಗತ್ತಿನಾದ್ಯಂತ ಇರುವ ಮಲಯಾಳಿಗಳು ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ. ಇದು 10 ದಿನಗಳ ಹಬ್ಬವಾಗಿದೆ. ಸುಗ್ಗಿಯ ಪ್ರಾರಂಭದಿಂದ ಹಿಡಿದು ವಿಷ್ಣುವಿನ ವಾಮನ ಅವತಾರ, ಮಹಾಬಲಿ ರಾಜನ ಪೂಜೆಗಳನ್ನು ಮಾಡಲಾಗುತ್ತದೆ. ಆಗಸ್ಟ್ 12ರಿಂದಲೇ ಓಣಂ ಶುರುವಾಗಿದ್ದು, ಆಗಸ್ಟ್ 23ಕ್ಕೆ ಮುಕ್ತಾಯವಾಗುತ್ತದೆ.
PublicNext
21/08/2021 02:09 pm