ನವದೆಹಲಿ : ಯಮುನಾ ನದಿಯಲ್ಲಿ ಅಮೋನಿಯಾ ಹೆಚ್ಚಳವಾಗಿ ದೆಹಲಿಗೆ ಜಲ ಗಂಡಾಂತರ ಶುರುವಾಗಿದೆ. ಇನ್ನು ಯಮುನಾ ನದಿ ಇಷ್ಟೊಂದು ಮಲಿನವಾಗಿದ್ದರೂ ಜನ ಮಾತ್ರ ಪೂಜೆ ನೆಪದಲ್ಲಿ ಇಂತಹ ಕೊಳಕು ನೀರಿನಲ್ಲಿಯೇ ಸ್ನಾನ ಮಾಡಿ ಛತ್ ಪೂಜೆ ಮಾಡಿದ್ದಾರೆ.
ಇಂದು ಹಲವಾರು ಭಕ್ತರು ವಿಷಕಾರಿ ನೊರೆಯಿಂದ ಆವೃತವಾಗಿರುವ ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಇನ್ನು ವಿಷಕಾರಿ ನೊರೆಯನ್ನು ಲೆಕ್ಕಿಸದ ಜನ ಕಾಯಿ, ಹೂ, ಹಣ್ಣು ಅರ್ಪಿಸುವ ಮೂಲಕ ಛತ್ ಪೂಜೆ ನೆರವೇರಿಸುತ್ತಿದ್ದಾರೆ. ಈ ವೀಡಿಯೊಗಳು ಮತ್ತು ಫೋಟೋಗಳು ಸದ್ಯ ವೈರಲ್ ಆಗಿವೆ. ಯಮುನಾ ನದಿಯಲ್ಲಿ ಅಮೋನಿಯಾ ಸ್ವೀಕಾರಾರ್ಹ ಮಟ್ಟಕ್ಕಿಂತಲೂ ಅಧಿಕವಾಗಿದ್ದು, ರಾಷ್ಟ್ರ ರಾಜಧಾನಿಗೆ ನೀರಿನ ಬವಣೆ ಎದುರಾಗುವ ಸಾಧ್ಯತೆಗಳಿವೆ. ಸದ್ಯ ಯಮುನೆಯಲ್ಲಿ ಅಮೋನಿಯಾ 0.5 ಪಿಪಿಎಂ ಅನ್ನೂ ದಾಟಿದೆ.
PublicNext
08/11/2021 02:21 pm