ಪಾವಗಡ: ವಿದ್ಯಾರ್ಥಿಗಳಿಗೆ ನೀಡುವ ದಾನವು ದೇವಸ್ಥಾನಗಳಿಗೆ ನೀಡುವ ದಾನಕ್ಕಿಂತಲೂ ಶ್ರೇಷ್ಠ ಎನ್ನುವ ಇಚ್ಛೆಯೊಂದಿಗೆ ಪಾವಗಡ ತಾಲೂಕಿನ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ನಿರಂತರವಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತಾ ಬರುತ್ತಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ನಿರೀಕ್ಷೆ ಮಾಡಿದ್ದ ವಿದ್ಯಾರ್ಥಿನಿಗೆ, ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪದ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಮಂಗಳವಾರ
ಹೆಲ್ಪ ಸೊಸಾಯಿಟಿ ಆರ್ಥಿಕ ನೆರವು ನೀಡಿದೆ.
ಮನೆಯಲ್ಲಿ ಬಡತನ ಅಡ್ಡಿಯಾಗಿ ಇನ್ನು ಹೆಚ್ಚು ಓದಲು ಹಂಬಲಿಸುತ್ತಿದ್ದ ತಾಲೂಕಿನ ಜಯಶ್ರೀ (ಹೆಸರು ಬದಲಿಸಲಾಗಿದೆ ) ಎಂಬ ವಿದ್ಯಾರ್ಥಿನಿಗೆ ಅರ್ಥಿಕ ತೊಂದ ಇತ್ತು. ಈ ಬಗ್ಗೆ ಗ್ರಾಮದ ಯುವ ಮಿತ್ರರು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರಿಗೆ ನೆರವನ್ನು ಕೋರಿದ್ದರು. ಆ ಕೂಡಲೇ ವಿದ್ಯಾರ್ಥಿನಿ ಹಾಗೂ ಪೋಷಕರ ಸಮ್ಮುಖದಲ್ಲಿ ಹೆಲ್ಪ್ ಸೊಸೈಟಿ ಆರ್ಥಿಕ ನೆರವನ್ನು ನೀಡಿ ವಿದ್ಯಾರ್ಥಿನಿ ಉಜ್ಜಲ ಭವಿಷ್ಯಕ್ಕೆ ನೆರವಾಗಿದ್ದಾರೆ.
ಅದರಂತೆ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ಹೆಲ್ಪ್ ಸೊಸೈಟಿ ನೆರವನ್ನು ನೀಡುತ್ತಿರುವುದು ಸಂತಸ ತಂದಿದೆ ಎಂದು ವಿದ್ಯಾರ್ಥಿನಿ ಪೋಷಕರು ಹರ್ಷ ವ್ಯಕ್ತಪಡಿಸಿದರು. ಇದೇ ರೀತಿ ಇತರ ವಿದ್ಯಾರ್ಥಿಗಳಿಗೆ ಇವರ ಕಾರ್ಯ ಮುಂದುವರೆಯಲಿ ಎಂದು ಆಶಿಸಿದ್ದಾರೆ.
PublicNext
19/07/2022 10:27 pm