ಅಯೋಧ್ಯಾ (ಉತ್ತರ ಪ್ರದೇಶ)- ಅಯೋಧ್ಯೆ ವಿವಾದ ಬಗೆಹರಿದ್ದೂ ಆಯ್ತು. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದೂ ಆಯ್ತು. ಈಗ ಅಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ. ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದು 28 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ಆಚರಿಸಲಾಗುತ್ತಿದೆ. ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.
ಅಯೋದ್ಯೆಯಲ್ಲಿ ದೀಪಾವಳಿ ಆಚರಣೆ ಇದ್ದರೂ ವಿವಾದಿತ ಜಾಗದಲ್ಲಿ ಆಚರಣೆಗೆ ಅವಕಾಶ ಇರಲಿಲ್ಲ. ಅಲ್ಲಿನ ಒಂದು ಪುಟ್ಟ ಟೆಂಟ್ ನಲ್ಲಿ ಇದ್ದ ಬಾಲ ಶ್ರೀರಾಮನ ವಿಗ್ರಹವನ್ನು ಈಗ ಮುಖ್ಯ ಸ್ಥಳದಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಟಾಪಿಸಲಾಗಿದೆ. ಈಗ ಅದೇ ಮೂರ್ತಿಯ ಮುಂದೆ ದೀಪಾವಳಿ ಆಚರಿಸಲು ಸರ್ಕಾರದಿಂದಲೇ ಸಕಲ ತಯಾರಿ ನಡೆದಿದೆ. ಬಾಲ ರಾಮನ ಮುಂದೆ ಹಬ್ಬ ಆಚರಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಉತ್ಸುಕರಾಗಿದ್ದಾರೆ.
PublicNext
31/10/2020 11:49 am