ಲಡಾಖ್‌ನ ಶುಶುಲ್ ಮೂಲಕ ಹಾದು ಹೋಗುತ್ತಿದ್ದ ಸಾಲು ಹಾಲು ಐಟಿಬಿಪಿ ಸೈನಿಕರಿಗೆ ಖಡಕ್ ಸೆಲ್ಯೂಟ್ ಹೊಡೆದ ವಿಡಿಯೋ ಇಂಟರ್‌ನೆಟ್ ಜಗತ್ತಿನಲ್ಲಿ ಸೆನ್ಸೆಷನ್ ಸೃಷ್ಟಿಸಿದ್ದ ಬಾಲಕ ನವಾಂಗ್ ನಮಗ್ಯಾಲ್‌ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ನೆರವಿನ ಹಸ್ತ ಚಾಚಿದ್ದು 2.5 ಲಕ್ಷ ರೂ. ದೇಣಿಗೆಯಾಗಿ ನೀಡಿದ್ದು ಮತ್ತೇ ಬಾಲಕ ಸುದ್ದಿಯಾಗಿದ್ದಾನೆ.
ಹೌದು ! ಫ್ಲಾಗ್ ಆಫ್ ಹಾನರ್ ಫೌಂಡೇಶನ್ ಮೂಲಕ ಬರೋಬ್ಬರಿ 2.5 ಲಕ್ಷ ರೂ. ನೆರವನ್ನು ರಾಜೀವ್ ಚಂದ್ರಶೇಖರ್ ನೀಡಿದ್ದು, ಬಾಲಕನ ದೇಶಪ್ರೇಮ ಎಲ್ಲರಿಗೂ ಪ್ರೇರಣದಾಯಕವಾಗಿ ಲಡಾಖಿ ಮಗುವಿನ ಆಕಾಂಕ್ಷೆಗಳಿಗೆ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅಭಿಪ್ರಾಯ ಹಂಚಿಕೊಂಡು ಬಾಲಕನ ದೇಶ ಪ್ರೇಮಕ್ಕೆ ಇಂಬು ನೀಡಿದ್ದರು.
ಅಕ್ಟೋಬರ್ 11ರಂದು ನಡೆದ ಈ ಘಟನೆಯ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಳಿಕ ರಾಜ್ಯಸಭಾ ಸಂಸದ ಮಗುವಿಗೆ ಸಹಾಯ ಮಾಡಲು ಟ್ವೀಟ್ ಮಾಡಿ ವಿವರ ನೀಡುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಫ್ಲ್ಯಾಗ್ಸ್ ಆಫ್ ಹಾನರ್ ಫೌಂಡೇಶನ್ ಮೂಲಕ 2.5 ಲಕ್ಷ ರೂಪಾಯಿ ದೇಣಿಗೆಯ ನೀಡಿ ರಾಜೀವ್ ಚಂದ್ರಶೇಖರ್ ನೆರವಿನ ಹಸ್ತ ಚಾಚಿದ್ದಾರೆ.
PublicNext
30/10/2020 04:05 pm