ಉತ್ತರ ಪ್ರದೇಶ : ಲಕ್ನೋದಲ್ಲಿ ಮುಸಲ್ಮಾನ್ ವ್ಯಕ್ತಿಯೊಬ್ಬ ಹಿಂದೂ ದೇವಾಲಯದಲ್ಲಿ ಹನುಮಾನ್ ವಿಗ್ರಹವನ್ನು ಧ್ವಂಸ ಮಾಡಿದ ಘಟನೆ ಸಪ್ಟೆಂಬರ್ 7 ರಂದು ಲಕ್ನೋದ ಗೋಮ್ತಿ ದಂಡೆಯಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ನಡೆದಿದೆ.
ಈಗಾಗಲೇ ಆರೋಪಿ ತೌಫೀಕ್ ಅಹ್ಮದ್ ಎಂದು ಗುರುತಿಸಲಾಗಿದ್ದು ಆತನ ಮೇಲೆ ಪ್ರಕರಣ ಸಹ ದಾಖಲಾಗಿದೆ. ಆರೋಪಿ ಹಣೆಗೆ ತಿಲಕವಿಟ್ಟುಕೊಂಡು ದೇವಸ್ಥಾನದ ಆವರಣಕ್ಕೆ ನುಗ್ಗಿ, ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ದೇವರ ವಿಗ್ರಹವನ್ನು ಧ್ವಂಸ ಮಾಡಲು ಆರಂಭಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇವಸ್ಥಾನ ಪ್ರವೇಶಿಸಿದ ತೌಫೀಕ್ ಮೊದಲು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದರು, ಮತ್ತು ನಂತರ ವಿಗ್ರಹಗಳನ್ನು ಒಡೆಯಲು ಕಲ್ಲು ಎಸೆದಿದ್ದಾನೆ. ಆರೋಪಿ ದೇವಾಲಯದ ಧ್ವಜವನ್ನು ಸಹ ಹರಿದಿದ್ದಾನೆ. ಘಟನೆ ಬಳಿಕ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೇವಾಲಯದಲ್ಲಿ ಎರಡು ವಿಗ್ರಹಗಳು ಭಗ್ನಗೊಂಡಿವೆ. ಕಸ್ಟಡಿಗೆ ಪಡೆದಿರುವ ಆರೋಪಿ ತೌಫೀಕ್ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳುತ್ತಲಿದ್ದಾರೆ.
PublicNext
09/09/2022 12:54 pm