ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗನಲ್ಲಿ ತಡರಾತ್ರಿ ಚಾಕು ಇರಿದು ಯುವಕನ ಕೊಲೆ

ಗದಗ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಆರೋಪದಲ್ಲಿ ಯುವಕ‌ನೋರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗದಗ ನಗರದ ತೋಂಟದಾರ್ಯ ಮಠದ ಕಮಾನಿನ ಬಳಿ ನಡೆದಿದೆ.

ಜವಳಗಲ್ಲಿಯ ಸುದೀಪ ಮುಂಡೆವಾಡಿ (20) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಐದಾರು ಜನ ಇರುವ ಗುಂಪಿನೊಂದಿಗೆ ಈತ ಜಗಳವಾಡಿಕೊಂಡು ಬಂದಿದ್ದ. ನಂತರ ಆ ಗುಂಪು ಈತನನ್ನ ಕರೆಯಿಸಿಕೊಂಡು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಹಲವಾರು ಬಾರಿ ಚುಚ್ಚಿದ‌ ಪರಿಣಾಮ ತೀವ್ರ ರಕ್ತಸ್ರಾವದಿಂದ ಯುವಕ ಬಳಲುತ್ತಿದ್ದ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಯುವಕ ಸಾವನ್ನಪ್ಪಿದ್ದಾನೆ. ಸದ್ಯ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Edited By : Shivu K
PublicNext

PublicNext

09/09/2022 10:08 am

Cinque Terre

60.49 K

Cinque Terre

0