ಉತ್ತರ ಪ್ರದೇಶ: ಸಾಮಾನ್ಯವಾಗಿ ಪೊಲೀಸರ ಕಣ್ತಪ್ಪಿಸಿದ ಮರಳು ಸಾಗಾಟ ಮಾಡುವವರನ್ನ ನೀವು ನೋರ್ಡಿತಿರಾ.. ಆದ್ರೆ ಇಲ್ಲಿನ ಕೆಲ ಭೂಪರು ಯಾರ ಭಯವು ಇಲ್ಲದೇ ಜೊತೆಗೆ ಯಾರೂ ತಡೆಯದೇ ಇರೋ ಹಾಗೇ ತಮ್ಮದೇ ರಭಸದಲ್ಲಿ ಎಗ್ಗಿಲ್ಲದೇ ಮರಳು ಸಾಗಾಟ ಮಾಡಿದ್ದಾರೆ.
ಹೌದು..ಆಗ್ರಾದ ಗ್ವಾಲಿಯರ್ ಹೆದ್ದಾರಿಯಲ್ಲಿರುವ ಜಜೌ ಟೋಲ್ ಪ್ಲಾಜಾದಲ್ಲಿ ನಿನ್ನೆ ರಾತ್ರಿ, ಸ್ಥಳೀಯ ಮರಳು ಮಾಫಿಯಾಕ್ಕೆ ಸೇರಿದ 13 ಮರಳು ತುಂಬಿದ ಟ್ರ್ಯಾಕ್ಟರ್‌ಗಳು ಟೋಲ್‌ಗೇಟ್‌ಗೆ ನುಗ್ಗಿ ಅಲ್ಲಿದ್ದ ಗೇಟ್‌ನ್ನೆ ಹಾರಿಸಿಕೊಂಡು ಹೋಗಿರುವ ಘಟನೆ ಕಂಡುಬಂದಿದೆ. ಈ ದೃಶ್ಯದಲ್ಲಿ ಮರಳು ತುಂಬಿದ ಟ್ರಾಕ್ಟರ್‌ಗಳು ಹೇಗೆ ಟೋಲ್ ಬೂತ್‌ಗೆ ನುಗ್ಗುತ್ತವೆ ಎಂಬುದು ನೀವು ನೋಡಬಹುದು. ಇನ್ನು ಅವರನ್ನು ತಡೆಯಲು ಟೋಲ್ ಸಿಬ್ಬಂದಿ ಪ್ರಯತ್ನಿಸಿದ್ದಾರೆ.
ಸುಮಾರು 53 ಸೆಕೆಂಡ್ ವಿಡಿಯೋದಲ್ಲಿ 13 ಟ್ರ್ಯಾಕ್ಟರ್‌ಗಳು ಟೋಲ್ ಪ್ಲಾಜಾ ಮೂಲಕ ಅಜಾಗರೂಕತೆಯಿಂದ ವೇಗವಾಗಿ ಚಲಿಸುತ್ತಿರುವುದನ್ನು ಕಾಣಬಹುದು. ಮೊದಲ ಟ್ರಾಕ್ಟರ್ ಹೇಗೆ ನುಗ್ಗುತ್ತದೆಯೋ ಅದೇ ರೀತಿ, ಅದನ್ನು ಅನುಸರಿಸುವ 12 ಟ್ರಾಕ್ಟರುಗಳು ಮುಂದೆಸಾಗಿವೆ..ಇನ್ನು ಈ ಟ್ರ್ಯಾಕ್ಟರ್‌ಗಳು ಸ್ಥಳೀಯ ಮರಳು ಮಾಫಿಯಾಕ್ಕೆ ಸೇರಿವೆ ಎನ್ನಲಾಗ್ತಿದೆ.
ಈ ಘಟನೆಯು ಆಗ್ರಾ ಗ್ವಾಲಿಯರ್ ಹೆದ್ದಾರಿಯಲ್ಲಿರುವ ಜಜೌ ಟೋಲ್ ಪ್ಲಾಜಾದಲ್ಲಿ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದು, ಸದ್ಯ ಈ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಕೂಡ ಆಗಿದ್ದು, ಈ ವಿಚಾರದ ಬಗ್ಗೆ ಪೊಲೀಸರು ಮಾಹಿತಿ ದೊರೆತಿದ್ದು, ವಿಚಾರಣೆ ನಡೆಸಿದ್ದಾರೆ..
PublicNext
05/09/2022 02:09 pm