ಜಾರ್ಖಂಡ್ : ಕೆಲವು ಪ್ರೀತಿ ಎಷ್ಟು ಕ್ರೂರವಾಗಿರುತ್ತದೆ ಎಂದರೆ ಅದು ಹೇಗೆ ಅವರಿಗೆ ಇಂತಹ ನೀಚ ಕೆಲಸ ಮಾಡಲು ಮನಸ್ಸಾಗುತ್ತದೆಯೋ ದೇವರೇ ಬಲ್ಲ. ಹೌದು ಪ್ರತಿ ಪ್ರೀತಿಗೂ ಅದರದ್ದೇ ಆದ ಗೌರವವಿದೆ. ಆದ್ರೆ ಇಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿ ಕ್ರೌರ್ಯತೆ ಮೆರೆದಿದ್ದಾನೆ.
ಹೌದು 12ನೇ ತರಗತಿ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿರೋ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಂಡ್ ನ ದುಮ್ಕಾದಲ್ಲಿ ಯುವಕನೊಬ್ಬ ವಿದ್ಯಾರ್ಥಿನಿಗೆ ಪ್ರೀತಿಸುತ್ತಿದ್ದ. ಆದರೆ ವಿದ್ಯಾರ್ಥಿನಿ ಆತನನ್ನು ತಿರಸ್ಕರಿಸಿ ಅವಮಾನ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಯುವಕ ಬಾಲಕಿಗೆ ಜೀವಂತವಾಗಿ ಬೆಂಕಿ ಹಚ್ಚಿದ್ದಾನೆ. ಸದ್ಯ ಯುವಕನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.
ಇನ್ನು ಸುಟ್ಟ ಗಾಯಗಳಿಂದ ತೀವ್ರವಾಗಿ ಅಸ್ವಸ್ಥಳಾಗಿದ್ದ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾಳೆ.
PublicNext
30/08/2022 09:45 am