ಪಾಟ್ನಾ: ಬಿಹಾರದ ಮೂವರು ಸರಕಾರಿ ಅಧಿಕಾರಿಗಳ ಮನೆಗಳ ಮೇಲೆ ವಿಜಿಲೆನ್ಸ್ ಇನ್ವೆಸ್ಟಿಗೇಶನ್ ಬ್ಯೂರೋ (ವಿಐಬಿVIB) ದಾಳಿ ನಡೆಸಿದ ನಂತರ 4 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಲೋಕೋಪಯೋಗಿ ಇಲಾಖೆಯ ಕಿಶನ್‌ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರೈ ಅವರಿಗೆ ಸಂಬಂಧಿಸಿದ ಬಿಹಾರದ ಪಾಟ್ನಾ ಮತ್ತು ಕಿಶನ್‌ಗಂಜ್‌ನಲ್ಲಿ ವಿಐಬಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ.
ವಿಜಿಲೆನ್ಸ್ ಅಧಿಕಾರಿಗಳು ರೈ ಅವರ ಕಿಶನ್‌ಗಂಜ್ ಮನೆಗೆ ಆಗಮಿಸಿದಾಗ, ರೈ ಕಿಕ್‌ಬ್ಯಾಕ್ ರೂಪದಲ್ಲಿ ಪಡೆದ ಹಣವನ್ನು ತಮ್ಮ ಕೈಕೆಳಗೆ ಕೆಲಸ ಮಾಡುವ ಜೂನಿಯರ್ ಇಂಜಿನಿಯರ್ ಮತ್ತು ಕ್ಯಾಷಿಯರ್‌ನ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ತಿಳಿದುಕೊಂಡರು. ಇದರ ಬೆನ್ನಲ್ಲೇ ತಂಡಗಳು ರೈ ಅವರ ಅಧೀನ ಅಧಿಕಾರಿಗಳ ಮೇಲೆ ದಾಳಿ ನಡೆಸಿವೆ.
ಕಿಶನ್‌ಗಂಜ್‌ನಲ್ಲಿರುವ ಕ್ಯಾಷಿಯರ್‌ನ ಮನೆಯಲ್ಲಿ ತಪಾಸಣೆ ನಡೆಸಿದಾಗ 3 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ. ಅದೇ ಸಮಯದಲ್ಲಿ, ಸಂಜಯ್ ಕುಮಾರ್ ರೈ ಅವರ ಪಾಟ್ನಾ ನಿವಾಸದಿಂದ ಸುಮಾರು 1 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.
PublicNext
27/08/2022 05:17 pm