ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡು ತಿಂಗಳ ನಂತರ ಪತ್ತೆಯಾದ ಬೆಂಗಳೂರು ಯುವಕನ ಮೃತದೇಹ

ಬೆಂಗಳೂರು : ಬರೋಬ್ಬರಿ ಎರಡು ತಿಂಗಳ ನಂತರ ಬೆಂಗಳೂರು ಯುವಕನ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಯುವಕ ಎರಡು ತಿಂಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಹಿಮಾಚಲ ಪ್ರದೇಶ ಮನಾಲಿಗೆ ಮೌಂಟನ್ ಟ್ರಕಿಂಗ್‌ಗಾಗಿ ಹೋಗಿದ್ದರು. ಆದರೆ ಯುವಕನ ದುರಾದೃಷ್ಟಕ್ಕೆ ಟ್ರಕಿಂಗ್ ವೇಳೆ ಕಾಲು ಜಾರಿ ಹಿಮದ ಗುಹೆಯೊಳಗೆ ಬಿದ್ದಿದ್ದ. ಆ ಕೂಡಲೇ ಯುವಕನ ಜೊತೆ ಇದ್ದ ಸ್ನೇಹಿತರು ಯುವಕನನ್ನು ರಕ್ಷಿಸಲು ಮುಂದಾದರು ಆದರೆ ರಕ್ಷಣಾ ವಿಫಲಗೊಂಡಿತು. ಕೂಡಲೇ ಟ್ರಕ್ಕಿಂಗ್ ಆಗಿ ತೆರಳಿದ ತಂಡ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಸ್ಥಳೀಯ ಅಧಿಕಾರಿಗಳು ಮತ್ತು ಆರ್ಮಿ ಸಿಬ್ಬಂದಿ ಯುವಕನ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ರಕ್ಷಣಾ ಕಾರ್ಯಾಚರಣೆಗೆ ಹವಾಮಾನ ಅಡ್ಡಿಯಾಯಿತು. ಯುವಕ ಆಗಲೇ ಬಿದ್ದು ಮೂರು ಗಂಟೆಗಳ ಕಳೆದುಹೋಗಿತ್ತು. ಯುವಕ ಬಿದ್ದ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಸೇರಿದಾಗ ಯುವಕ ಅಲ್ಲಿ ಪತ್ತೆಯಾಗಿರಲಿಲ್ಲ. ಅವನು ಇನ್ನೂ ಗಾಢವಾದ ಗುಹೆಯಲ್ಲಿ ಜಾರಿ ಬಿದ್ದಿರಬಹುದು ಎಂದು ಕಾರ್ಯಾಚರಣೆ ಸ್ಥಗಿತಗೊಳಿಸಿ ಮರುದಿನ ಪ್ರಾರಂಭ ಮಾಡಲಾಯಿತು.

ಎರಡು ತಿಂಗಳ ನಂತರ ಬೆಂಗಳೂರು ಯುವಕ ವೇದ ವ್ಯಾಸನ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ಮನಾಲಿಯಲ್ಲಿ ಇರಿಸಲಾಗಿದ್ದು, ಬೆಂಗಳೂರಿನಲ್ಲಿರುವ ಯುವಕನ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

Edited By : Abhishek Kamoji
PublicNext

PublicNext

26/08/2022 12:39 pm

Cinque Terre

36.69 K

Cinque Terre

0

ಸಂಬಂಧಿತ ಸುದ್ದಿ