ಹೈದರಾಬಾದ್: ನನಗೆ ನಿಜಕ್ಕೂ ಶಾಕ್ ಆಗುತ್ತಿದೆ. ಎಲ್ಲದಕ್ಕೂ ಒಬ್ಬ ವ್ಯಕ್ತಿ ಮೇಲೆ ಆರೋಪ ಮಾಡಲಾಗುತ್ತಿದೆ. ಈ ಬೆಳವಣಿಗೆಯನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ನಟ ಅಲ್ಲು ಅರ್ಜುನ್ ಬಂಧನ ಹಾಗೂ ಬಿಡುಗಡೆ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಬರೆದಿರುವ ಅವರು, ಇದು ದುರದೃಷ್ಟಕರ ಹಾಗೂ ದುಃಖಕರ ಘಟನೆ. ಎಲ್ಲದಕ್ಕೂ ಒಬ್ಬರನ್ನೇ ಹೊಣೆ ಮಾಡುತ್ತಿರುವುದನ್ನು ನೋಡಿದರೆ ಬೇಸವಾಗುತ್ತಿದೆ ಎಂದಿದ್ದಾರೆ.
PublicNext
14/12/2024 12:59 pm