ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಆರ್‌ಟಿಓ ಏಜೆಂಟ್‌ನ ಬರ್ಬರ ಹತ್ಯೆ.!

ಗದಗ: ಆರ್‌ಟಿಓ ಏಜೆಂಟನೋರ್ವನನ್ನ ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರ, ರಾಮೆನಹಳ್ಳಿ ರಸ್ತೆಯ ಹೊರವಲಯದಲ್ಲಿ ನಡೆದಿದೆ‌.

ಮಾರುತಿ ಅಂಕಲಗಿ (35) ಮೃತ ವ್ಯಕ್ತಿಯಾಗಿದ್ದು, ಗದಗನ ಗಂಗಿಮಡಿ ಆಶ್ರಯ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ. ಗದಗನಲ್ಲಿ ಆರ್.ಟಿ.ಓ ಏಜೆಂಟ್ ಆಗಿದ್ದ ಮಾರುತಿಯ ತಡರಾತ್ರಿ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಊರಾಚೆ ಕರೆತಂದು ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಲೆಗೆ ಸ್ನೇಹಿತರ ಬಳಿ ಹಣಕಾಸಿನ ವ್ಯವಹಾರವೇ ಕಾರಣ ಎಂಬ ಆರೋಪ ಎನ್ನಲಾಗಿದ್ದು, ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

25/08/2022 09:39 am

Cinque Terre

36.12 K

Cinque Terre

0

ಸಂಬಂಧಿತ ಸುದ್ದಿ