ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌದಿಗೆ ಹಾರಿದ ಪತ್ನಿ: ಮಕ್ಕಳೊಂದಿಗೆ ವಿಷ ಕುಡಿದ ಪತಿ

ತುಮಕೂರು : ಮಕ್ಕಳಿಗೆ ವಿಷ ಕಡಿಸಿ ತಾನೂ ವಿಷ ಕುಡಿದು ತಂದೆ ಹಾಗೂ ಮಕ್ಕಳು ಆತ್ಮ ಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ನಗರದ ಪಿಎಚ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು,ವಿಷ ಕುಡಿದ ತಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮಕ್ಕಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರಳಾಡುತ್ತಿವೆ.

ಸಾಹಿರಾ ಬಾನು ಪತಿ ಹಾಗು ಮಕ್ಕಳನ್ನು ಬಿಟ್ಟು ಸೌದಿಗೆ ಹಾರಿದ್ದಳು,ಮನೆ ಕೆಲಸ ಮಾಡಿಕೊಂಡು ಮೋಜು ಮಸ್ತಿ ಜೀವನಕ್ಕೆ ಶರಣಾಗಿದ್ದ ಸಾಹಿರಾಬಾನು ಗಂಡನಿಗೆ ವಿಡಿಯೋ ಕಾಲ್ ಮಾಡಿ ರೇಗಿಸುತ್ತಿದ್ದಳು. ಗಂಡ ಹಾಗೂ ಮಕ್ಕಳು ಮರಳಿ ಬರುವಂತೆ ಪರಿಪರಿಯಾಗಿ ಬೇಡಿದರೂ ಸಾಹಿರಾಬಾನು ಮನಸು ಮಾತ್ರ ಕರಗಲಿಲ್ಲ.

ಇದರಿಂದ ಬೇಸತ್ತ ಗಂಡ ತನ್ನ ಮೂವರು ಮಕ್ಕಳೊಂದಿಗೆ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ದುರ್ಘಟನೆಯಲ್ಲಿ ತಂದೆ ಮೃತಪಟ್ಟಿದ್ದು ಮಕ್ಕಳ ಸ್ಥಿತಿ ದಯನೀಯವಾಗಿದೆ.ಪ್ರಪಂಚದಲ್ಲಿ ಕೆಟ್ಟ ತಾಯಿಯರೂ ಇರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

18/08/2022 07:06 pm

Cinque Terre

113.77 K

Cinque Terre

17

ಸಂಬಂಧಿತ ಸುದ್ದಿ