ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹೆತ್ತ ತಂದೆಯನ್ನೇ ಕೊಲೆ‌ ಮಾಡಿದ ಮಗ: ಹುಲಕೋಟಿ ಗ್ರಾಮದಲ್ಲಿ ಬೆಚ್ಚಿಬಿಳಿಸೋ ಹತ್ಯೆ

ಗದಗ: ಕೌಟುಂಬಿಕ ಕಲಹದಿಂದ ಮಗನೇ ತನ್ನ ಹೆತ್ತ ತಂದೆಯನ್ನ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ‌ ಮಾಡಿರೋ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಗಣೇಶ್ ನಗರದಲ್ಲಿ ನಡೆದಿದೆ.

57 ವರ್ಷದ ಗಣೇಶ್ ಚಿಕ್ಕನಹಟ್ಟಿ ಮೃತ ದುರ್ದೈವಿ ತಂದೆಯಾಗಿದ್ದು, ಮಗ ವಿಜಯ ಚಿಕ್ಕನಹಟ್ಟಿ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ತಂದೆ ಗಣೇಶ್ ಚಿಕ್ಕನಟ್ಟಿ ಮನೆಯಲ್ಲಿ ಮಲಗಿದ್ದ ವೇಳೆ ಮಗ ವಿಜಯ ಕುತ್ತಿಗೆಗೆ ಕೊಡಲಿಯಿಂದ ಬರಬ್ಬರವಾಗಿ ಕೊಚ್ಚಿದ ಪರಿಣಾಮ ತಂದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಆರೋಪಿ ವಿಜಯ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಸ್ಥಳಕ್ಕೆ ಭೇಟಿ‌ ನೀಡಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

17/08/2022 08:25 pm

Cinque Terre

131.45 K

Cinque Terre

8